` ಅಜಯ್ ದೇವಗನ್ 8 ನಿಮಿಷ. ಆಲಿಯಾ ಭಟ್ 15 ನಿಮಿಷ : ಆರ್‍ಆರ್‍ಆರ್ ಸ್ಪೆಷಲ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಜಯ್ ದೇವಗನ್ 8 ನಿಮಿಷ. ಆಲಿಯಾ ಭಟ್ 15 ನಿಮಿಷ : ಆರ್‍ಆರ್‍ಆರ್ ಸ್ಪೆಷಲ್
Ajay Devagan, Alia Bhat

ಅಜಯ್ ದೇವಗನ್ ಬಾಲಿವುಡ್ ಸೂಪರ್ ಸ್ಟಾರ್. ಅಜಯ್ ದೇವಗನ್ ಚಿತ್ರಗಳಿಗೆ ಇಡೀ ದೇಶದಲ್ಲಿ ಅದ್ಭುತ ಓಪನಿಂಗ್ ಸಿಗುತ್ತೆ. ಅತ್ತ ಅಲಿಯಾ ಭಟ್ ಕೂಡಾ ಬಾಲಿವುಡ್‍ನ ಲೇಡಿ ಸ್ಟಾರ್. ಚೆಂದದ ನಟಿ ಎನ್ನುವುದನ್ನೂ ಸಾಬೀತು ಪಡಿಸಿರುವ ಆಲಿಯಾಗೆ ಕೈತುಂಬಾ ಅವಕಾಶಗಳಿವೆ. ಆದರೆ.. ಇವರಿಬ್ಬರೂ ರಾಜಮೌಳಿಗಾಗಿ ಆರ್‍ಆರ್‍ಆರ್ ಚಿತ್ರಗಳಲ್ಲಿ ಪುಟ್ಟ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರಂತೆ.

ಆರ್‍ಆರ್‍ಆರ್ ಚಿತ್ರಕ್ಕೆ ಎನ್‍ಟಿಆರ್ ಮತ್ತು ರಾಮ್ ಚರಣ್ ತೇಜ ಹೀರೋಗಳು. ಆ ಚಿತ್ರದಲ್ಲಿ ನಟಿಸಿರೋ ಅಜಯ್ ದೇವಗನ್ ಅವರಿಗೆ ಇರೋದು 8 ನಿಮಿಷದ ರೋಲ್. ಅಲಿಯಾ ಭಟ್ ಅವರಿಗೆ ಇರೋದು 15 ನಿಮಿಷದ ರೋಲ್. ಚಿತ್ರದಲ್ಲಿ ಅಷ್ಟು ಕಡಿಮೆ ಅವಧಿ ಕಾಣಿಸಿಕೊಳ್ಳೋ ಪಾತ್ರವಾದರೂ ಚಿತ್ರದಲ್ಲಿ ಆ ಪಾತ್ರಗಳಿಗೆ ದೊಡ್ಡ ಸ್ಕೋಪ್ ಇದೆಯಂತೆ. ಕೇವಲ ರಾಜಮೌಳಿ ಚಿತ್ರದಲ್ಲಿ ನಟಿಸಬೇಕು ಎಂಬ ಕಾರಣಕ್ಕೆ ಆ ಪುತ್ರಗಳಿಗೆ ಅಜಯ್ ದೇವಗನ್ ಮತ್ತು ಅಲಿಯಾ ಭಟ್ ಇಬ್ಬರೂ ಓಕೆ ಎಂದರಂತೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery