ಎ.ಪಿ.ಅರ್ಜುನ್ ನಿರ್ದೇಶನದ ಚಿತ್ರ ಮಾರ್ಟಿನ್. ಪೊಗರು ನಂತರ ಧ್ರುವ ಸರ್ಜಾ ನಟಿಸುತ್ತಿರೋ ಈ ಚಿತ್ರ ಇಬ್ಬರೂ ಜೊತೆಯಾಗಿರೋ 2ನೇ ಸಿನಿಮಾ. ಉದಯ್ ಮೆಹ್ತಾ ನಿರ್ಮಾಣದ ಮಾರ್ಟಿನ್ ಚಿತ್ರಕ್ಕೆ ಮಾಗಡಿ ರಸ್ತೆ ಬಳಿ ಪುರಾತನ ಕಾಲದ ಸೆಟ್ ಹಾಕಲಾಗಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ. ಆ ಚಿತ್ರಕ್ಕೀಗ ನಾಯಕಿ ಸಿಕ್ಕಿದ್ದಾರೆ.
ಅನ್ವೇಷಿ ಜೈನ್ ಎಂಬ ಈ ಚೆಲುವೆ 2020ರಲ್ಲಿ ಅತೀ ಹೆಚ್ಚು ಜನ ಗೂಗಲ್ ಮಾಡಿದ್ದ ಸುಂದರಿ. ಗಂಧೀಬಾತ್ ಸೇರಿದಂತೆ ಕೆಲವು ಎರೋಟಿಕ್ ವೆಬ್ ಸಿರೀಸ್‍ಗಳಲ್ಲಿ ನಟಿಸಿರುವ ಹಾಟ್ ಬ್ಯೂಟಿ. ಗಾಯಕಿ, ಮಾಡೆಲ್ ಮತ್ತು ಈವೆಂಟ್‍ಗಳಲ್ಲಿ ನಿರೂಪಕಿಯಾಗಿಯೂ ಕೆಲಸ ಮಾಡುತ್ತಿರೋ ಅನ್ವೇಷಿ, ಅರ್ಜುನ್ ಅನ್ವೇಷಣೆಯಲ್ಲಿ ಮಾರ್ಟಿನ್‍ಗೆ ಸಿಕ್ಕಿರೋ ಚೆಲುವೆ.