ತಮಿಳುನಾಡಿನಲ್ಲಿ ನಟಿ ಖುಷ್`ಬೂ, ರಮ್ಯಕೃಷ್ಣ.. ಆಂಧ್ರದಲ್ಲಿ ಸೌಂದರ್ಯ.. ಮೊದಲಾದವರಿಗೆ ದೇವಸ್ಥಾನ ಕಟ್ಟಿರುವುದನ್ನು ನೋಡಿದ್ದೀರಿ. ಕೇಳಿದ್ದೀರಿ. ಮಂಡ್ಯದಲ್ಲಿ ಅಂಬರೀಷ್ ಮೃತಪಟ್ಟ ನಂತರ ದೇವಸ್ಥಾನ ಕಟ್ಟುವ ಸಾಹಸವಾಯಿತು. ಆದರೀಗ ಕಿಚ್ಚ ಸುದೀಪ್ ಅವರಿಗೆ ದೇವಸ್ಥಾನ ಕಟ್ಟುತ್ತಿದ್ದಾರೆ ಅವರ ಫ್ಯಾನ್ಸ್.
ರಾಯಚೂರು ಜಿಲ್ಲೆ. ದೇವದುರ್ಗ ತಾಲೂಕು. ಕುರುಕುಂದ ಗ್ರಾಮದಲ್ಲಿ ಸುದೀಪ್ ದೇವಸ್ಥಾನ ಕಟ್ಟಲಾಗುತ್ತಿದೆ. ಸುಮಾರು 3 ತಿಂಗಳಿಂದ ನಡೆಯುತ್ತಿರುವ ಗುಡಿ ಕಟ್ಟುವ ಕೆಲಸ ಈಗ ಮುಕ್ತಾಯದ ಹಂತದಲ್ಲಿದೆ. ಗ್ರಾಮದ ಶರಣು ಬಸವ ನಾಯಕ ಎನ್ನುವವರು ಸುದೀಪ್ ದೇವಸ್ಥಾನಕ್ಕಾಗಿ 35-45 ಅಡಿ ವಿಸ್ತೀರ್ಣದ ಜಾಗವನ್ನು ಉಚಿತವಾಗಿ ನೀಡಿದ್ದಾರೆ. ಹಣ ಹೊಂದಿಸಿರುವುದು ಸುದೀಪ್ ಅಭಿಮಾನಿಗಳೇ. ದೇವಸ್ಥಾನಕ್ಕೆ ಸುಮಾರು 12 ಲಕ್ಷ ರೂ. ಖರ್ಚಾಗಿದೆ.
ವಿಷಯವನ್ನು ತಿಳಿದಿದ್ದ ಸುದೀಪ್, ತಮಗೆ ದೇವಸ್ಥಾನ ಕಟ್ಟುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದರಂತೆ. ಆದರೆ, ಅಭಿಮಾನಿಗಳು ಕೇಳಿಲ್ಲ. ಅವರು ದೇವಸ್ಥಾನ ಉದ್ಘಾಟನೆಗೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ದೇವಸ್ಥಾನ ನೋಡೋಕೆ ಖಂಡಿತಾ ಕರೆತರುತ್ತೇವೆ ಎಂಬ ವಿಶ್ವಾಸದಲ್ಲಿದ್ದಾರೆ ದೇವಸ್ಥಾನದ ಉಸ್ತುವಾರಿ ಹೊತ್ತಿರುವ ಸುದೀಪ್ ಅಭಿಮಾನಿ ದೇವರಾಜ ನಾಯಕ.