ನಿಖಿಲ್ ಕುಮಾರಸ್ವಾಮಿ ನಟಿಸಿರುವ ಹೊಸ ಸಿನಿಮಾ ರೈಡರ್. ರೈಡರ್ ಚಿತ್ರದಲ್ಲಿ ನಿಖಿಲ್ ಅವರದ್ದು ಬ್ಯಾಸ್ಕೆಟ್‍ಬಾಲ್ ಆಟಗಾರನ ಪಾತ್ರ. ಆದರೆ ಅವರೀಗ ಕಬಡ್ಡಿ ಆಟಗಾರನಾಗಿದ್ದಾರೆ.
ಜೆಡಿಎಸ್ ಯುವ ಘಟಕದ ಅಧ್ಯಕ್ಷರೂ ಆಗಿರುವ ನಿಖಿಲ್ ಇತ್ತೀಚೆಗೆ ಮದ್ದೂರಿಗೆ ಭೇಟಿ ಕೊಟ್ಟಿದ್ದರು. ದೊಡ್ಡರಸಿನಕೆರೆಯಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದರು. ಸ್ಥಳೀಯರ ಜೊತೆ ಕಬಡ್ಡಿ ಆಡಿ ಖುಷಿಪಟ್ಟರು.
ರೈಡರ್ ಸಿನಿಮಾ ಡಿ.24ರಂದು ರಿಲೀಸ್ ಆಗುತ್ತಿದೆ. ಕಾಶ್ಮೀರ ಪರದೇಸಿ ನಾಯಕಿಯಾಗಿರೋ ಚಿತ್ರಕ್ಕೆ ವಿಜಯ್ ಕುಮಾರ್ ಕೊಂಡ ನಿರ್ದೇಶಕರಾಗಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ.