` 10 ಕೋಟಿ ಕ್ಲಬ್ ಸೇರಿದ ಪ್ರೇಮಂ ಪೂಜ್ಯಂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
10 ಕೋಟಿ ಕ್ಲಬ್ ಸೇರಿದ ಪ್ರೇಮಂ ಪೂಜ್ಯಂ
Premam Poojyam Movie Image

ಪ್ರೇಮಂ ಪೂಜ್ಯಂ. ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾ. ಈ ಮ್ಯೂಸಿಕಲ್ ಲವ್ ಸ್ಟೋರಿ 25ನೇ ದಿನ ಪೂರೈಸಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಡಾ.ರಾಘವೇಂದ್ರ ನಿರ್ದೇಶನದ ಮೊದಲ ಸಿನಿಮಾ ಪ್ರೇಮಂ ಪೂಜ್ಯಂ. ಒಂದು ಪವಿತ್ರ ಪ್ರೇಮವನ್ನು ಅಷ್ಟೇ ಪವಿತ್ರವಾಗಿ ಹೇಳಿರುವ ಸಿನಿಮಾ.

ಸಿನಿಮಾದ ನಿರ್ಮಾಪಕರೆಲ್ಲ ವೈದ್ಯರೇ. ವೈದ್ಯರಿಂದ ವೈದ್ಯರಿಗಾಗಿ ವೈದ್ಯರೇ ನಿರ್ಮಿಸಿದ ಚಿತ್ರ ಈಗ ಕಾಲೇಜು ವಿದ್ಯಾರ್ಥಿಗಳ ಮನಸ್ಸು ಗೆದ್ದಿದೆ. ಚಿತ್ರದ ಲೆಂಗ್ತ್ ಕೂಡಾ ಕಡಿಮೆ ಮಾಡಿದ ಮೇಲೆ ಚಿತ್ರಕ್ಕೆ ವೇಗವೂ ಸಿಕ್ಕಿದೆ . ಅಷ್ಟೇ ಅಲ್ಲ, ಚಿತ್ರದ ಕಲೆಕ್ಷನ್ ಸುಧಾರಿಸಿದ್ದು ಚಿತ್ರವೀಗ 10 ಕೋಟಿ ಕ್ಲಬ್ ಸೇರಿದೆ.