ಗರುಡ ಗಮನ ವೃಷಭ ವಾಹನ. ಯಶಸ್ವಿಯಾಗಿ ಪ್ರದರ್ಶನವಾಗುತ್ತಿರೋ ಸಿನಿಮಾ. ರಾಜ್ ಬಿ.ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಜೋಡಿ ಮೋಡಿಯನ್ನೇ ಮಾಡಿಬಿಟ್ಟಿದೆ. ನಿರ್ದೇಶಕರಾಗಿ, ನಟರಾಗಿ..ಎರಡೂ ವಿಭಾಗಗಳಲ್ಲಿ ಬೆರಗು ಹುಟ್ಟಿಸಿರುವ ರಾಜ್ ಬಿ.ಶೆಟ್ಟಿ ಈಗ ವಿವಾದವನ್ನೂ ಎದುರಿಸುವಂತಾಗಿದೆ. ಅದಕ್ಕೆಲ್ಲ ಕಾರಣವಾಗಿರೋದು ಚಿತ್ರದ ದೃಶ್ಯವೊಂದರಲ್ಲಿ ಬಳಸಿರುವ ಮಾದಪ್ಪನ ಹಾಡು.
ಸೋಜುಗಾದ ಸೂಜುಮಲ್ಲಿಗೆ.. ಮಲೆ ಮಹದೇಶ್ವರನ ಕುರಿತು ಭಕ್ತಿಯ ಜನಪದ ಗೀತೆ. ಚಿತ್ರದಲ್ಲಿ ಕೊಲೆ ಮಾಡಿದ ನಂತರ ಶಿವನ ಪಾತ್ರ ವಿಕೃತವಾಗಿ ಕುಣಿಯುವಾಗ ಬ್ಯಾಕ್ಗ್ರೌಂಡ್ನಲ್ಲಿ ಸೋಜುಗಾದ ಸೂಜುಮಲ್ಲಿಗೆ ಹಾಡು ಪ್ಲೇ ಆಗುತ್ತೆ. ಆ ದೃಶ್ಯಕ್ಕೆ ಇಂತಹ ಹಾಡು.. ಅದೂ ಮಾದಪ್ಪನ ಹಾಡು ಬೇಕಿತ್ತಾ? ಅಗತ್ಯವಿತ್ತಾ? ಎಂಬ ಪ್ರಶ್ನೆ ಎದ್ದಿದೆ.
ಕುಸುಮಾ ಆಯರಹಳ್ಳಿ, ಸ್ವಾಮಿ ಪೊನ್ನಾಚಿಯಂತಹ ಸಾಹಿತಿ, ಲೇಖಕರು ಸೋಷಿಯಲ್ ಮೀಡಿಯಾದಲ್ಲೇ ಈ ಪ್ರಶ್ನೆ ಎತ್ತಿದ್ದಾರೆ.