ಪ್ರತೀ ಹೊಸ ವರ್ಷದ ಸಂಭ್ರಮಕ್ಕೊಂದು ಕಿಕ್ ಕೊಡೋ ಹಾಡು ಸೃಷ್ಟಿಸುವ ಸಂಪ್ರದಾಯ ಪಾಲಿಸುತ್ತಿರೋದು ಚಂದನ್ ಶೆಟ್ಟಿ. ಪೊಗರು ನಂತರ ದೊಡ್ಡ ಮಟ್ಟದ ಹೆಸರು ಮಾಡಿದರೂ.. ತಮ್ಮ ಸಂಪ್ರದಾಯವನ್ನು ಮುಂದುವರೆಸಿದ್ದಾರೆ ಚಂದನ್. 2022ರ ಹೊಸ ವರ್ಷದ ಸಂಭ್ರಮದ ಕಿಚ್ಚಿಗೆ ಲಕಲಕ ಲ್ಯಾಂಬೋರ್ಗಿಣಿ ಹಾಡು ಹೊರತರುತ್ತಿದ್ದಾರೆ. ಆ ಲ್ಯಾಂಬೋರ್ಗಿಣಿ ಬೇರಿನ್ಯಾರೂ ಅಲ್ಲ, ಡಿಂಪಲ್ ಕ್ವೀನ್ ರಚಿತಾ ರಾಮ್.
ಲ್ಯಾಂಬೋರ್ಗಿಣಿ, ನಮ್ಮ ಹಾಡಿನ ಲೇಡಿ ಲೀಡ್ ಹೆಸರು. ಮೊದಲು ಒಂದು ಹಾಡಿಗೆ ಹೆಜ್ಜೆ ಹಾಕಬೇಕಾ ಎಂದು ರಚಿತಾ ರಾಮ್ ಹಿಂದೇಟು ಹಾಕಿದರು. ಆದರೆ, ಹಾಡಿನ ಸಾಹಿತ್ಯ ಮತ್ತು ನಮ್ಮ ಪ್ರೆಸೆಂಟೇಷನ್ ಪ್ಲಾನ್ ಕೇಳಿದ ಮೇಲೆ ಓಕೆ ಎಂದರು. ಈ ಹಾಡಿಗೆ ನಂದ ಕಿಶೋರ್ ಅವರೇ ಡೈರೆಕ್ಷನ್ ಮಾಡಿದ್ದು, ಮುರಳಿ ಕೊರಿಯೋಗ್ರಫಿ ಮಾಡಿದ್ದಾರೆ. ಮಾಸ್ ಬೀಟ್ಸ್, ಕ್ಯಾಚಿ ಲಿರಿಕ್ಸ್ ಮತ್ತು ಸಖತ್ ಕಾಸ್ಟ್ಯೂಮ್ ಬಳಸುತ್ತಿದ್ದೇವೆ ಎಂದಿದ್ದಾರೆ ಚಂದನ್ ಶೆಟ್ಟಿ..