ಟ್ರೇಲರ್, ಹಾಡುಗಳಲ್ಲಿ ಕಿಚ್ಚು ಹಚ್ಚಿಸಿರೋ ಮದಗಜ ಚಿತ್ರ ಡಿಸೆಂಬರ್ 3ಕ್ಕೆ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ, ಚುಟು ಚುಟು ಪಟಾಕಿ ಅಶಿಕಾ ರಂಗನಾಥ್, ಜಗಪತಿ ಬಾಬು ನಟಿಸಿರೋ ಚಿತ್ರಕ್ಕೆ ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶಕ. ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಣದ ಸಿನಿಮಾ ಸೆನ್ಸಾರ್ ಆಗಿದ್ದು ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ.
ದೇಶಾದ್ಯಂತ ಏಕಕಾಲಕ್ಕೆ ರಿಲೀಸ್ ಆಗುತ್ತಿರುವ ಮದಗಜ ಚಿತ್ರ 1400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲೂ ರಿಲೀಸ್ ಆಗುತ್ತಿರೋ ಚಿತ್ರ ಮದಗಜ.