ಆತ ಅಪ್ಪು ಅಭಿಮಾನಿ. ಅಭಿಮಾನಿಯಷ್ಟೇ ಅಲ್ಲ, ಆತನ ಕುಟುಂಬದ ಕಷ್ಟಕ್ಕೆ ಅಪ್ಪು ನೆರವನ್ನೂ ನೀಡಿದ್ದರಂತೆ. ಅದನ್ನು ಆ ಬೆನಕ ಅಪ್ಪು ಹೇಳಿಕೊಂಡಿದ್ದಾರೆ. ಒಂದು ಕಡೆ ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನದ ಶಾಕ್‍ನಲ್ಲಿದ್ದಾಗ, ಇತ್ತ ಅವರ ತಾಯಿಗೆ ಅಪಘಾತವಾಗಿದೆ. ಅಪಘಾತವಾಗಿ ಆಸ್ಪತ್ರೆಯಲ್ಲಿದ್ದವರಿಗೆ ಕೆಲವು ತುರ್ತು ಸರ್ಜರಿಗಳಾಗಬೇಕಿತ್ತಂತೆ.
ಆದರೆ, ಅದು ಅಪ್ಪು ಬೆನಕ ಅವರ ಶಕ್ತಿ ಮೀರಿದ್ದ ಹಣವಾಗಿತ್ತು. ಏನು ಮಾಡುವುದೆಂದು ತೋಚದೆ ಕುಳಿತಿದ್ದ ಆತನ ಬಗ್ಗೆ, ಆತನ ಗೆಳೆಯರೊಬ್ಬರು ಕಿಚ್ಚ ಸುದೀಪ್ ಟ್ರಸ್ಟ್‍ಗೆ ತಿಳಿಸಿದ್ದಾರೆ.
ತಕ್ಷಣ ಆತನ ನೆರವಿಗೆ ಧಾವಿಸಿದೆ ಕಿಚ್ಚ ಸುದೀಪ್ ಟ್ರಸ್ಟ್ ಚಿಕಿತ್ಸಗೆ ಬೇಕಾದ ವ್ಯವಸ್ಥೆ ಮಾಡಿದ್ದು, ಆಸ್ಪತ್ರೆ ವೆಚ್ಚ ನೋಡಿಕೊಳ್ಳೋ ಭರವಸೆ ನೀಡಿದ್ದಾರೆ.