Print 
ramesh aravind, meghana gaonkar radhika narayan, shivaji suratkal 2,

User Rating: 0 / 5

Star inactiveStar inactiveStar inactiveStar inactiveStar inactive
 
ಶಿವಾಜಿ ಸುರತ್ಕಲ್ -2 ಆರಂಭ
Shivaji Suratkal 2 Muhurtha Image

ಲಾಕ್ ಡೌನ್ ಶುರುವಾಗುವ ಮುನ್ನ ರಿಲೀಸ್ ಆಗಿ ಹಿಟ್ ಆಗಿದ್ದ ಚಿತ್ರ ಶಿವಾಜಿ ಸುರತ್ಕಲ್. ರಮೇಶ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದ ಚಿತ್ರವೀಗ 2ಭಾಗದಲ್ಲಿ ತೆರೆಗೆ ಬರುತ್ತಿದೆ. ಶಿವಾಜಿ ಸುರತ್ಕಲ್ 2 ಚಿತ್ರ ಶುರುವಾಗಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರೋ ಬಂಡೆ ಗಣೇಶ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ.

ರಮೇಶ್, ರಾಧಿಕಾ ನಾರಾಯಣ್ ಜೊತೆಗೆ ಈ ಬಾರಿ ಮೇಘನಾ ಗಾಂವ್ಕರ್, ವಿನಾಯಕ್ ಜೋಷಿ, ರಾಕೇಶ್ ಸೇರ್ಪಡೆಗೊಂಡಿದ್ದಾರೆ. ಎಲ್ಲರದ್ದೂ ಪೊಲೀಸ್ ಪಾತ್ರಗಳೇ ಎನ್ನುವುದು ವಿಶೇಷ. ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್ 2 ಚಿತ್ರೀಕರಣ ಡಿಸೆಂಬರ್‍ನಲ್ಲಿ ಶುರುವಾಗಲಿದೆ.