ದೃಶ್ಯ 2. ಮಲಯಾಳಂ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ಈಗಾಗಲೇ ಬಂದಾಯ್ತು. ಈಗ ಕನ್ನಡದ ಸರದಿ. ಕನ್ನಡದಲ್ಲಿಯೂ ದೃಶ್ಯ ಸೂಪರ್ ಹಿಟ್ ಆಗಿತ್ತು. ರಾಜೇಂದ್ರ ಪೊನ್ನಪ್ಪನ ಹೋರಾಟಕ್ಕೆ ಪ್ರೇಕ್ಷಕ ಜೈ ಎಂದಿದ್ದ. ಈಗ ದೃಶ್ಯ 2 ಬರುತ್ತಿದೆ. ರಾಜೇಂದ್ರ ಪೊನ್ನಪ್ಪನ ಫ್ಯಾಮಿಲಿಗೆ ಈಗ ಕಿಚ್ಚನ ಪ್ರವೇಶವಾಗುತ್ತಿದೆ.
ರವಿಚಂದ್ರನ್ ಅವರ ಜೊತೆ ವಿಶೇಷ ಬಾಂಧವ್ಯ ಹೊಂದಿರುವ ಸುದೀಪ್, ಚಿತ್ರದ ಟ್ರೇಲರ್ ಬಿಡುಗಡೆಗೆ ಬರುತ್ತಿದ್ದಾರೆ. ಟ್ರೇಲರ್ ರಿಲೀಸ್‍ನ್ನು ದೃಶ್ಯ 2 ನಿರ್ಮಾಪಕರು ಅದ್ಧೂರಿಯಾಗಿಯೇ ಮಾಡುತ್ತಿದ್ದಾರೆ. ಇ4 ಎಂಟರ್‍ಟೈನ್‍ಮೆಂಟ್‍ನಲ್ಲಿ ನಿರ್ಮಾಣವಾಗಿರುವ ಚಿತ್ರದಲ್ಲಿ ನವ್ಯಾ ನಾಯರ್ ನಾಯಕಿ. ಅನಂತ್‍ನಾಗ್ ದೃಶ್ಯ 2 ನಲ್ಲಿ ಎಂಟ್ರಿ ಕೊಟ್ಟಿರುವ ಇನ್ನೊಬ್ಬ ಸ್ಟಾರ್. ಪಿ.ವಾಸು ನಿರ್ದೇಶನದ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಲಿದೆ.