` ತೆಲುಗಿಗೂ ಏಕ್ ಲವ್ ಯಾ : ರಕ್ಷಿತಾ ಪ್ರೇಮ್ ಭರ್ಜರಿ ಪ್ಲಾನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ತೆಲುಗಿಗೂ ಏಕ್ ಲವ್ ಯಾ : ರಕ್ಷಿತಾ ಪ್ರೇಮ್ ಭರ್ಜರಿ ಪ್ಲಾನ್
ತೆಲುಗಿಗೂ ಏಕ್ ಲವ್ ಯಾ : ರಕ್ಷಿತಾ ಪ್ರೇಮ್ ಭರ್ಜರಿ ಪ್ಲಾನ್

ಏಕ್ ಲವ್ ಯಾ ಚಿತ್ರ ಜನವರಿಯಲ್ಲಿ ರಿಲೀಸ್ ಆಗುತ್ತಿದೆ. 5 ಭಾಷಗಳಲ್ಲಿ ಬರುತ್ತಿರೋ ಚಿತ್ರದ ಹಾಡು, ಟೀಸರ್ ನೋಡಿದವರಿಗೆ ಇದು ಹೊಸ ನಟನ ಚಿತ್ರ ಎಂಬ ಫೀಲಿಂಗ್ ಬರುತ್ತಿಲ್ಲ. ಬದಲಿಗೆ ಇದು ಒಬ್ಬ ಸ್ಟಾರ್ ನಟನ ಚಿತ್ರ ಇರಬೇಕು ಎಂಬ ಭಾವನೆ ಬರುತ್ತಿದೆ. ಜೋಗಿ ಪ್ರೇಮ್ ಮೋಡಿಯೇ ಅಂಥದ್ದು. ಚಿತ್ರದ ಹಾಡು, ಟೀಸರ್‍ಗಳು ಕನ್ನಡದಲ್ಲಿ ಮೋಡಿ ಮಾಡಿವೆ. ಆ ಚಿತ್ರವನ್ನು ತೆಲುಗಿಗೂ ಕೊಂಡೊಯ್ಯೋಕೆ, ತಮ್ಮ ಪ್ರೀತಿಯ ತಮ್ಮನನ್ನು ತೆಲುಗಿನಲ್ಲಿ ಲಾಂಚ್ ಮಾಡೋಕೆ ಹೊರಟಿದ್ದಾರೆ ರಕ್ಷಿತಾ ಪ್ರೇಮ್.

ರಕ್ಷಿತಾಗೆ ತೆಲುಗು ಇಂಡಸ್ಟ್ರಿ ಹೊಸದಲ್ಲ. ಒಂದು ಕಾಲದಲ್ಲಿ ರಕ್ಷಿತಾ ಆಳಿದ್ದ ಚಿತ್ರರಂಗವದು. ಅಲ್ಲಿ ಏಕ್ ಲವ್ ಯಾ ಚಿತ್ರದ ಈವೆಂಟ್ ಮಾಡುವುದು ರಕ್ಷಿತಾ ಯೋಜನೆ. ಇನ್ನು ರಕ್ಷಿತಾಗೆ ಪುರಿ ಜಗನ್ನಾಥ್, ಮಹೇಶ್ ಬಾಬು, ರವಿತೇಜ ಸೇರಿದಂತೆ ತೆಲುಗು ಇಂಡಸ್ಟ್ರಿಯ ದಿಗ್ಗಜರ ಜೊತೆ ಒಳ್ಳೆಯ ಬಾಂಧವ್ಯ ಈಗಲೂ ಇದೆ. ತಮ್ಮ ರಾಣಾನನ್ನು ಪರಿಚಯಿಸುವ ಕಾರ್ಯಕ್ರಮವನ್ನು ಅವರೆಲ್ಲರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮಾಡೋಕೆ ರಕ್ಷಿತಾ ರೆಡಿಯಾಗಿದ್ದಾರೆ.