ಲವ್ ಯೂ ರಚ್ಚು ಚಿತ್ರದ ಸುಂದರಿ ಯಾರು? ನೋ ಡೌಟ್.. ಎಲ್ಲರೂ ಹೇಳೋ ಹೆಸರು ರಚ್ಚು ಅಲಿಯಾಸ್ ರಚಿತಾ ರಾಮ್ ಅವರ ಹೆಸರನ್ನೇ. ಆದರೆ.. ರಚ್ಚುವನ್ನೂ ಮೀರಿಸೋ ಇನ್ನೊಬ್ಬಳು ಸುಂದರಿ ಆ ಚಿತ್ರದಲ್ಲಿದ್ದಾಳೆ. ಆಕೆಯ ಹೆಸರು ಚರಿಷ್ಮಾ. ರಚ್ಚು ಮತ್ತು ಚರಿಷ್ಮಾ.. ಇಬ್ಬರಲ್ಲಿ ಯಾರು ಸುಂದರಿ ಎಂದರೆ.. ಅನುಮಾನವೇ ಇಲ್ಲದಂತೆ ಅಜೇಯ್ ರಾವ್ ಎತ್ತಿಕೊಂಡು ಮುದ್ದಾಡೋದು ಚರಿಷ್ಮಾ ಅವರನ್ನೇ.
ಕನ್‍ಫ್ಯೂಸ್ ಆಗುವಂತದ್ದೇನೂ ಇಲ್ಲ. ಲವ್ ಯೂ ರಚ್ಚು ಚಿತ್ರದಲ್ಲಿ ನಟಿಸಿರೋ ಆ ಚರಿಷ್ಮಾ, ಅಜೇಯ್ ರಾವ್ ಅವರ ಪ್ರೀತಿಯ ಪುತ್ರಿ. ಈ ಚಿತ್ರದಲ್ಲಿರೋ ಸರ್‍ಪ್ರೈಸ್ ಆಕೆಯೇ. ಪುಟಾಣಿ ಬೇಬಿ ಚರಿಷ್ಮಾ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಳೆ.
ಆಕೆಯ ಪಾತ್ರ ಇಡೀ ಚಿತ್ರದಲ್ಲಿ ತುಂಬಾನೇ ಸ್ಪೆಷಲ್. ಬೇಬಿ ಚರಿಷ್ಮಾ ಪಾತ್ರ, ಇಡೀ ಚಿತ್ರದ ಹೈಲೈಟ್ ಎಂದಿದ್ದಾರೆ ನಿರ್ಮಾಪಕ ಗುರು ದೇಶಪಾಂಡೆ. ಶಂಕರ್ ಎಸ್.ರಾಜ್ ನಿರ್ದೇಶನದ ಮೊದಲ ಚಿತ್ರ ಲವ್ ಯೂ ರಚ್ಚು. ಈಗಾಗಲೇ ಚಿತ್ರದ ರೊಮ್ಯಾಂಟಿಕ್ ಸಾಂಗ್ ಹವಾ ಎಬ್ಬಿಸಿದೆ.