ರೌಡಿ, ರಫ್ & ಟಫ್ ಪಾತ್ರಗಳಲ್ಲೇ ಇತ್ತೀಚೆಗೆ ಹೆಚ್ಚಾಗಿ ನಟಿಸಿದ್ದ ಡಾಲಿ ಧನಂಜಯ್ ರೊಮ್ಯಾಂಟಿಕ್ ಟ್ರ್ಯಾಕ್ಗೆ ವಾಪಸ್ ಆಗಿದ್ದಾರೆ. ಅವರಿಗೆ ಜೊತೆಯಾಗಿರೋದು ಆದಿತಿ ಪ್ರಭುದೇವ. ಒನ್ಸ್ ಅಪಾನ್ ಎ ಟೈಂ ಜಮಾಲಿಗುಡ್ಡದಲ್ಲಿ ಅವರಿಬ್ಬರ ರೊಮ್ಯಾನ್ಸ್ಗೆ ಌಕ್ಷನ್ ಕಟ್ ಹೇಳ್ತಿರೋದು ಕುಶಾಲ್ ಗೌಡ.
ಕನ್ನಡಕ್ಕಾಗಿ ಒಂದನ್ನು ಒತ್ತಿ ಅನ್ನೋ ವಿಭಿನ್ನ ಶೀರ್ಷಿಕೆಯ ಸಿನಿಮಾದಿಂದ ಗಮನ ಸೆಳೆದಿದ್ದ ಕುಶಾಲ್ ಗೌಡ, ಈ ಬಾರಿಯೂ ಡಿಫರೆಂಟ್ ಟೈಟಲ್ನ್ನೇ ಇಟ್ಟಿದ್ದಾರೆ. ಒನ್ಸ್ ಅಪಾನ್ ಎ ಟೈಂ ಜಮಾಲಿಗುಡ್ಡದಲ್ಲಿ ಮಾಸ್ ಎಂಟರ್ಟೈನರ್ ರೊಮ್ಯಾಂಟಿಕ್ ಸ್ಟೋರಿ ಇದೆಯಂತೆ.
ಜಮಾಲಿಗುಡ್ಡ ಅನ್ನೋದು ನಾವೇ ಸೃಷ್ಟಿಸಿರೋ ಒಂದು ಕಾಲ್ಪನಿಕ ಜಾಗ. ಅಲ್ಲಿ ನಡೆಯೋ ಲವ್ ಸ್ಟೋರಿಯನ್ನು ನಾವು ವಿಭಿನ್ನವಾಗಿ ಹೇಳ್ತೇವೆ ಅನ್ನೋದು ಕುಶಾಲ್ ಗೌಡ ಮಾತು. ಚಿತ್ರಕ್ಕೆ ಈಗಾಗಲೇ ಭಾವನಾ ರಾಮಣ್ಣ, ಪ್ರಕಾಶ್ ಬೆಳವಾಡಿ, ಯಶ್ ಶೆಟ್ಟಿ, ತ್ರಿವೇಣಿ, ಪ್ರಕಾಶ್ ಶೆಣೈ, ನಂದಗೋಪಾಲ್ ಎಂಟ್ರಿ ಕೊಟ್ಟಿದ್ದಾರೆ. ಶ್ರೀಹರಿ ಚಿತ್ರದ ನಿರ್ಮಾಪಕರು.