` ಮದಗಜ ಭಾರೀ ಮೊತ್ತಕ್ಕೆ ಹಿಂದಿಗೆ ಮಾರಾಟ : ಎಷ್ಟು ಕೋಟಿ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮದಗಜ ಭಾರೀ ಮೊತ್ತಕ್ಕೆ ಹಿಂದಿಗೆ ಮಾರಾಟ : ಎಷ್ಟು ಕೋಟಿ?
Madagaja Movie Image

ಶ್ರೀಮುರಳಿ, ಅಯೋಗ್ಯ ಮಹೇಶ್, ಉಮಾಪತಿ ಶ್ರೀನಿವಾಸ ಗೌಡ ಕಾಂಬಿನೇಷನ್ ಸಿನಿಮಾ ಮದಗಜ. ಇದೇ ಡಿಸೆಂಬರ್ 4ಕ್ಕೆ ರಿಲೀಸ್ ಆಗುತ್ತಿರೋ ಮದಗಜ, ಈಗಾಗಲೇ ಸೆನ್ಸೇಷನ್ ಸೃಷ್ಟಿಸಿದೆ. ಚಿತ್ರದ ಟ್ರೇಲರ್, ಮೇಕಿಂಗ್ ವ್ಹಾರೆವ್ಹಾ ಎನ್ನಿಸುವಂತಿದೆ. ಕನ್ನಡದಲ್ಲಷ್ಟೇ ಅಲ್ಲದೆ ತೆಲುಗಿನಲ್ಲೂ ಬರುತ್ತಿದೆ ಮದಗಜ. ಈಗ ರಿಲೀಸ್ ಆಗುವುದಕ್ಕೂ ಮೊದಲೇ ಮದಗಜ ಚಿತ್ರದ ಡಬ್ಬಿಂಗ್ ರೈಟ್ಸ್ ಭಾರಿ ಮೊತ್ತಕ್ಕೆ ಸೇಲ್ ಆಗಿವೆ ಎನ್ನುತ್ತಿವೆ ಮೂಲಗಳು.

ಉಗ್ರಂ ನಂತರ ಶ್ರೀಮುರಳಿಯ ಹಿಂದಿ ಡಬ್ಬಿಂಗ್ ಸಿನಿಮಾಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಮದಗಜ ಚಿತ್ರವೂ ಭಾರಿ ಮೊತ್ತಕ್ಕೆ ಸೇಲ್ ಆಗಿದೆ. ಒಂದು ಮೂಲದ ಪ್ರಕಾರ ಹಿಂದಿಯ ಡಬ್ಬಿಂಗ್ ಹಕ್ಕುಗಳು ಸುಮಾರು 8 ಕೋಟಿಗೆ ಸೇಲ್ ಆಗಿದೆ. ಡಿಸೆಂಬರ್ 4ರಂದು ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿರುವ ಮದಗಜ, ಸುಮಾರು 1500 ಸ್ಕ್ರೀನ್ಗಳಲ್ಲಿ ಪ್ರದರ್ಶನವಾಗಲಿದೆ.