Print 
ravichandran, shivarajkumar,

User Rating: 0 / 5

Star inactiveStar inactiveStar inactiveStar inactiveStar inactive
 
ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಬಾಳ್ಗೆ.. ಕನ್ನಡ ನಮ್ಮ ಪಾಲ್ಗೆ.. : ರವಿಚಂದ್ರನ್ ಚಿತ್ರಕ್ಕೆ ಹಾಡಿದ ಶಿವಣ್ಣ
Shivarajkumar, Ravichandran

ಕ್ರೇಜಿ ಸ್ಟಾರ್ ರವಿಚಂದ್ರನ್ ಇದೇ ಮೊದಲ ಬಾರಿಗೆ ಕನ್ನಡ ಭಾಷಾ ಪಂಡಿತನ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರ ಕನ್ನಡಿಗ. ಇದು ಫರ್ಡಿನಾಂಡ್ ಕಿಟಲ್ ಅವರ ಬದುಕಿನ ಕಥೆಯೂ ಇರುವ ಸಿನಿಮಾ. ಪ್ರಯೋಗಾತ್ಮಕ ಚಿತ್ರಗಳ ಮೂಲಕವೇ ವ್ಹಾವ್ ಎನ್ನಿಸಿದ್ದ ಗುರುರಾಜ್ ಈ ಚಿತ್ರಕ್ಕೆ ನಿರ್ದೇಶಕ. ಆ ಚಿತ್ರಕ್ಕೀಗ ಶಿವಣ್ಣ ಸಾಥ್ ಕೊಟ್ಟಿದ್ದಾರೆ. ಗೆಳೆಯನ ಚಿತ್ರದಲ್ಲೊಂದು ಅದ್ಭುತ ಹಾಡು ಹಾಡಿದ್ದಾರೆ ಶಿವರಾಜ್ ಕುಮಾರ್.

ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಬಾಳ್ಗೆ.. ಕನ್ನಡ ನಮ್ಮ ಪಾಲ್ಗೆ.. ಎಂಬ ಹಾಡನ್ನು ಶಿವಣ್ಣ ಹಾಡಿದ್ದರೆ, ಸಾಹಿತ್ಯ ಸಂತೋಷ್ ಆನಂದರಾಮ್ ಅವರದ್ದು. ರವಿ ಬಸ್ರೂರು ಸಂಗೀತದಲ್ಲಿ ಹಾಡು ಚೆಂದವಾಗಿ ಕೇಳಿಸುತ್ತಿದೆ. ಎನ್.ಎಸ್.ರಾಜಕುಮಾರ್ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.