` ರೆಮೋ ಲಾಂಚ್`ಗೆ ಕನ್ನಡ ಚಿತ್ರರಂಗದಲ್ಲಿ ಸಂಚಲನ. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರೆಮೋ ಲಾಂಚ್`ಗೆ ಕನ್ನಡ ಚಿತ್ರರಂಗದಲ್ಲಿ ಸಂಚಲನ.
Raymo Movie Image

ರೆಮೋ. ಪವನ್ ಒಡೆಯರ್ ನಿರ್ದೇಶನದ ಸಿನಿಮಾ. ಕನ್ನಡ ಚಿತ್ರರಂಗದ ಎರಡು ನಕ್ಷತ್ರಗಳನ್ನು ಒಟ್ಟಾಗಿ ಸೇರಿಸಿ ವಿಲನ್ ಚಿತ್ರ ನಿರ್ಮಿಸಿದ್ದ ಸಿ.ಆರ್.ಮನೋಹರ್, ರೆಮೋ ಚಿತ್ರಕ್ಕೆ ನಿರ್ಮಾಪಕ. ನಾಯಕರಾಗಿರೋದು ಅವರ ಸಹೋದರ  ಇಶಾನ್. ನಾಯಕಿ ಅಶಿಕಾ ರಂಗನಾಥ್. ಈ ಚಿತ್ರದ ಟೀಸರ್ ಲಾಂಚಿಂಗ್‍ಗೆ ಮುಹೂರ್ತ ಫಿಕ್ಸ್ ಆಗಿದೆ. ನ.25ರಂದು ನಡೆಯುತ್ತಿರೋ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗ ಒಂದಾಗುತ್ತಿರೋದು ಸಂಚಲನವನ್ನೇ ಸೃಷ್ಟಿಸಿದೆ.

ಏಕೆಂದರೆ ಟೀಸರ್ ಲಾಂಚ್‍ಗೆ ಕನ್ನಡ ಚಿತ್ರರಂಗದ ಸ್ಟಾರ್ ನಿರ್ಮಾಪಕ, ನಿರ್ದೇಶಕರೆಲ್ಲ ಒಂದೇ ವೇದಿಕೆಯಲ್ಲಿ ಸೇರುತ್ತಿದ್ದಾರೆ. ಪವನ್ ಒಡೆಯರ್ ಅವರೊಂದಿಗೆ ಯೋಗರಾಜ್ ಭಟ್, ಎ.ಹರ್ಷ, ಚೇತನ್ ಕುಮಾರ್, ಜೋಗಿ ಪ್ರೇಮ್, ತರುಣ್ ಸುಧೀರ್, ಎ.ಪಿ. ಅರ್ಜುನ್. ನಿರ್ಮಾಪಕರಾಗಿ ಕಾರ್ತಿಕ್ ಗೌಡ, ಜಯಣ್ಣ-ಭೋಗೇಂದ್ರ, ಕೆ.ಪಿ.ಶ್ರೀಕಾಂತ್, ಕೆ.ಮಂಜು  ವೇದಿಕೆಯಲ್ಲಿರುತ್ತಾರೆ. ಒಂದು ಸಿನಿಮಾ ಕಾರ್ಯಕ್ರಮಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಿರ್ಮಾಪಕರು, ನಿರ್ದೇಶಕರು ಒಟ್ಟಿಗೇ ಸೇರುತ್ತಿರುವುದು ಇದೇ ಮೊದಲು.