ನಿಖಿಲ್ ಕುಮಾರಸ್ವಾಮಿ ಅಭಿನಯದ ಬಹುನಿರೀಕ್ಷಿತ ಚಿತ್ರ ರೈಡರ್ ಡಿಸೆಂಬರಿನಲ್ಲಿ ರಿಲೀಸ್ ಆಗುತ್ತಿದೆ. ಡಿಸೆಂಬರ್ ಕೊನೆಯ ವಾರ 24ನೇ ತಾರೀಕು ರಿಲೀಸ್ ಎಂದು ಚಿತ್ರತಂಡ ಘೋಷಿಸಿದೆ. ಅಲ್ಲಿಗೆ ಡಿಸೆಂಬರ್ ಕೂಡಾ ಸ್ಟಾರ್ ಚಿತ್ರಗಳಿಂದ ತುಂಬಿ ತುಳುಕುವುದು ಖಾಯಂ.
ನಿಖಿಲ್ ಎದುರು ಕಾಶ್ಮೀರ ಪರದೇಸಿ ನಾಯಕಿಯಾಗಿ ನಟಿಸಿದ್ದು, ವಿಜಯ್ ಕುಮಾರ್ ಕೊಂಡ ನಿರ್ದೇಶಕರಾಗಿದ್ದಾರೆ. ಚಿತ್ರದ ಹಾಡು ಮತ್ತು ಟೀಸರ್ ಈಗಾಗಲೇ ಭರ್ಜರಿ ಸದ್ದು ಮಾಡುತ್ತಿವೆ.
ನಿಖಿಲ್ ಕುಮಾರ್ ಆಪ್ತ ಸುನೀಲ್ ಗೌಡ ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದು, ಲಹರಿ ಫಿಲಮ್ಸ್ ನಿರ್ಮಾಣದಲ್ಲಿ ಕೈಜೋಡಿಸಿದೆ. ಚಿತ್ರದಲ್ಲಿ ನಿಖಿಲ್ ಬ್ಯಾಸ್ಕೆಟ್ ಬಾಲ್ ಆಟಗಾರನಾಗಿ ನಟಿಸಿದ್ದಾರೆ.