` 100ಗೆ ಸುಧಾ ಮೂರ್ತಿ ಮೆಚ್ಚುಗೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
100ಗೆ ಸುಧಾ ಮೂರ್ತಿ ಮೆಚ್ಚುಗೆ
kananda movie 100

ರಮೇಶ್ ಅರವಿಂದ್ ನಟಿಸಿ ನಿರ್ದೇಶಿಸಿರುವ 100 ಸಿನಿಮಾ ನೋಡಿ ಸುಧಾ ಮೂರ್ತಿ ಗುಡ್ ಎಂದಿದ್ದಾರೆ. ಸೋಷಿಯಲ್ ಮೀಡಿಯಾ ಬಳಸುವ ಪ್ರತಿಯೊಬ್ಬರೂ ಈ ಸಿನಿಮಅ ನೋಡಬೇಕು ಎನ್ನುವುದು ಸುಧಾಮೂರ್ತಿ ಮಾತು. ಇತ್ತೀಚೆಗೆ ಯುವಜನ ಮೊಬೈಲ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಮುಳುಗಿ ಹೋಗಿದ್ದಾರೆ. ಗೊತ್ತಿಲ್ಲದ ವ್ಯಕ್ತಿಗಳೊಟ್ಟಿಗೆ ಸ್ನೇ ಬೆಳೆಸುತ್ತಾರೆ. ಅಪರಿಚಿತರ ಜೊತೆ ಅಂತರಂಗ ತೆರೆದಿಡುತ್ತಾರೆ. ಅದನ್ನು ಅವರು ಬಳಸಿಕೊಂಡು ಯಾವ  ಯಾವ ರೀತಿ ಕಿರುಕುಳ ಕೊಡಬಹುದು ಎನ್ನುವುದನ್ನು ಚಿತ್ರ ಚೆನ್ನಾಗಿ ಹೇಳಿದೆ. ಇತ್ತೀಚಿನ ದಿನಗಳಲ್ಲಿ ಬಂದಿರೋ ಒಂದು ಅತ್ಯುತ್ತಮ ಸಿನಿಮಾ ಎನ್ನುವುದು ಸುಧಾಮೂರ್ತಿ ಮಾತು.

100 ಸಿ‌ನಿಮಾವನ್ನ ರಮೇಶ್ ಅರವಿಂದ್ ಅವರೇ ನಿರ್ದೇಶನ ಮಾಡಿದ್ದು, ರಚಿತಾ ರಾಮ್, ಪೂರ್ಣ ನಾಯಕಿಯರಾಗಿ ಅಭಿನಯಿಸಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ 100 ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.