ಮದಗಜ. ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಇಲ್ಲಿ ಜೊತೆಯಾಗಿರುವ ಎಲ್ಲರದ್ದೂ ಹಿಂದಿನ ಚಿತ್ರಗಳಲ್ಲಿರೋದು ಗೆಲುವಿನ ಇತಿಹಾಸ. ನಿರ್ಮಾಪಕ ಉಮಾಪತಿ ಶ್ರೀನಿವಾಸ್`ಗೆ ರಾಬರ್ಟ್, ಶ್ರೀಮುರಳಿಗೆ ಭರಾಟೆ, ಅಯೋಗ್ಯ ಮಹೇಶ್ ಕುಮಾರ್‍ಗೆ ಅಯೋಗ್ಯ, ಅಶಿಕಾ ರಂಗನಾಥ್`ಗೆ ರ್ಯಾಂಬೋ 2 ಮತ್ತು ಇತ್ತೀಚಿನ ಪಟಾಕಿ ಪೋರಿಯೋ.. ಹಿಟ್ ಸಾಂಗು.. ಎಲ್ಲವೂ ಮತ್ತೊಮ್ಮೆ ರಿಪೀಟ್ ಆಗಲಿ ಎಂದು ಬಯಸುತ್ತಿರುವ ಚಿತ್ರ ಮದಗಜ. ಡಿಸೆಂಬರ್ 3ಕ್ಕೆ ರಿಲೀಸ್ ಆಗುತ್ತಿದ್ದು, ಚಿತ್ರದ ಟ್ರೇಲರ್‍ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಡಿ ಹೊಗಳಿದ್ದಾರೆ.
ಚಿತ್ರದ ಟ್ರೇಲರ್ ನೋಡಿದರೆ ಹಾಲಿವುಡ್ ರೇಂಜ್‍ನಲ್ಲಿದೆ. ಆ್ಯಕ್ಷನ್ ಮತ್ತು ಸೆಂಟಿಮೆಂಟ್ ಸಿನಿಮಾ ಅನಿಸುತ್ತಿದೆ. ಚಿತ್ರ ರಿಲೀಸ್ ಆದಮೇಲೆ ಖಂಡಿತಾ ನೋಡುತ್ತೇನೆ. ಶ್ರೀಮುರಳಿಗೆ ಶುಭವಾಗಲಿ ಎಂದು ಹಾರೈಸಿದರು ಬೊಮ್ಮಾಯಿ.
ಅಪ್ಪು ಇಲ್ಲದ ನೋವನ್ನು ಎದೆಯಲ್ಲಿ ಹೊತ್ತುಕೊಂಡೇ ಮಾತನಾಡಿದ ಶ್ರೀಮುರಳಿ ಮಾಮ ಇಲ್ಲ ಅನ್ನೋ ನೋವು ನಾವು ಇರುವವರೆಗೂ ಇರುತ್ತೆ. ಕರ್ತವ್ಯಕ್ಕೆ ಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ. ಒಂದು ವಿಭಿನ್ನ ಪ್ರಯತ್ನ ಈ ಚಿತ್ರದಲ್ಲಾಗಿದೆ. ಹರಸಿ ಎಂದರು ಶ್ರೀಮುರಳಿ.
ಸಿಟಿಯಲ್ಲಿಯೇ ಹುಟ್ಟಿ ಬೆಳೆದ ಅಶಿಕಾಗೆ ಚಿತ್ರದ ಪಲ್ಲವಿ ಪಾತ್ರ ಚಾಲೆಂಜಿಂಗ್ ಆಗಿತ್ತಂತೆ. ಕ್ರೆಡಿಟ್ ಎಲ್ಲವೂ ನಿರ್ದೇಶಕರಿಗೆ ಎಂದು ಮಹೇಶ್ ಅವರಿಗೆ ಥ್ಯಾಂಕ್ಸ್ ಹೇಳಿದರು ಅಶಿಕಾ.