ರಾಣ. ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ನಟಿಸುತ್ತಿರೋ ಹೊಸ ಸಿನಿಮಾ. ಈ ಸಿನಿಮಾದ ಒಂದು ಸ್ಪೆಷಲ್ ಹಾಡಿಗೆ ರಾಗಿಣಿ ದ್ವಿವೇದಿ ಹೆಜ್ಜೆ ಹಾಕಬೇಕಿತ್ತು. ಆದರೆ, ಈ ಹಾಡಿಗೆ ಈಗ ಸಂಯುಕ್ತಾ ಹೆಗ್ಡೆ ಎಂಟ್ರಿ ಕೊಟ್ಟಿದ್ದಾರೆ. ರಾಗಿಣಿ ದ್ವಿವೇದಿ ಜಾಗಕ್ಕೆ ಸಂಯುಕ್ತಾ ಏಕೆ? ಏನಾದರೂ ಮನಸ್ತಾಪವೇ ಎಂಬ ಪ್ರಶ್ನೆ ಉದ್ಭವಿಸೋದು ಸಹಜ.
ನೋ.. ನೋ.. ಹಾಗೇನಿಲ್ಲ. ಕಂಠೀರವದಲ್ಲಿ ಸೆಟ್ ರೆಡಿ ಇತ್ತು. ಇಷ್ಟು ಹೊತ್ತಿಗೆ ಹಾಡೂ ಮುಗಿದಿರಬೇಕಿತ್ತು. ಆದರೆ ಮಳೆಯಿಂದಾಗಿ ಲೇಟ್ ಆಯ್ತು. ಅತ್ತ ರಾಗಿಣಿ ಬೇರೆ ಪ್ರಾಜೆಕ್ಟ್‍ನಲ್ಲಿ ಬ್ಯುಸಿಯಾದರು. ಅನಿವಾರ್ಯವಾಗಿ ಸಂಯುಕ್ತಾ ಅವರನ್ನು ಆಯ್ಕೆ ಮಾಡಿಕೊಂಡೆವು ಎನ್ನುತ್ತಾರೆ ನಿರ್ದೇಶಕ ನಂದ ಕಿಶೋರ್.
ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ರಾಣ ಚಿತ್ರದಲ್ಲಿ ಶ್ರೇಯಸ್ ಹೀರೋ. ರೀಷ್ಮಾ ನಾಣಯ್ಯ ಹೀರೋಯಿನ್.