` ಅಶ್ವಿನಿ ಪುನೀತ್ ರಾಜ್`ಕುಮಾರ್ ಟ್ವೀಟ್ : ಪಿ.ಆರ್.ಕೆ. ಭವಿಷ್ಯ ಏನು? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಶ್ವಿನಿ ಪುನೀತ್ ರಾಜ್`ಕುಮಾರ್ ಟ್ವೀಟ್ : ಪಿ.ಆರ್.ಕೆ. ಭವಿಷ್ಯ ಏನು?
Ashwini Puneeth Rajkumar

ಪಿಆರ್‍ಕೆ, ಪುನೀತ್ ಅವರ ಕನಸಿನ ಕಂಪೆನಿ. ಹೊಸಬರಿಗೆ ಅವಕಾಶ ನೀಡುವ ಉದ್ದೇಶದಿಂದಲೇ ಶುರು ಮಾಡಿದ ಸಂಸ್ಥೆ. ಆ ಹಾದಿಯಲ್ಲಿ ಕವಲುದಾರಿ, ಫ್ರೆಂಚ್ ಬಿರಿಯಾನಿ, ಲಾ, ಮಾಯಾಬಜಾರ್.. ಮೊದಲಾದ ಚಿತ್ರಗಳನ್ನು ನಿರ್ಮಿಸಿದ್ದರು ಪುನೀತ್. ತಮ್ಮ ಸಂಸ್ಥೆಯಿಂದ ಹೊಸಬರ ಚಿತ್ರದ ಆಡಿಯೋ ಹಕ್ಕುಗಳನ್ನೂ ಖರೀದಿಸಿದ್ದರು. ಬೇರೆ ಬೇರೆ ರೀತಿಯಲ್ಲಿ ಹೊಸ ಪ್ರತಿಭಾವಂತರಿಗೆ ನೆರವಾಗಲೆಂದೇ ಹುಟ್ಟುಹಾಕಿದ್ದ ಸಂಸ್ಥೆಯ ಭವಿಷ್ಯ ಏನು? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಹಿಂದಿನದ್ದನ್ನು ಬದಲಿಸುವುದು ಅಸಾಧ್ಯ.  ಪುನೀತ್ ನಮಗೆ ನೀಡಿರುವ ಉತ್ಸಾಹ ಮತ್ತು ಸ್ಫೂರ್ತಿಯೊಂದಿಗೆ ಪಿಆರ್‍ಕೆ ಪ್ರೊಡಕ್ಷನ್ಸ್ ಮತ್ತು ಪಿಆರ್‍ಕೆ ಆಡಿಯೋದ ಉಜ್ವಲ ಭವಿಷ್ಯವನ್ನು ಮುಂದುವರೆಸುತ್ತೇವೆ. ನಮ್ಮ ಈ ಪ್ರಯಾಣಕ್ಕೆ ನಿಮ್ಮ ಬೆಂಬಲ ಇರಲಿ..

ಇಂತಾದ್ದೊಂದು ಸಂದೇಶ ನೀಡಿದೆ ಪಿಆರ್‍ಕೆ. ಅದೂ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹೆಸರಿನಲ್ಲಿ. ಪಿಆರ್‍ಕೆಯ ಪಯಣ ಮುಗಿದಿಲ್ಲ ಎಂದು ಈ ಮೂಲಕ ಹೇಳಿದ್ದಾರೆ ಅಶ್ವಿನಿ. ಗುಡ್ ಲಕ್ ಅಶ್ವಿನಿ ಪುನೀತ್ ರಾಜ್‍ಕುಮಾರ್.