ಇಂದಿನಿಂದ (ನವೆಂಬರ್ 20) ಗೋವಾದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. 52ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅಗಲಿದ ಕಲಾವಿದರಿಗೆ ಶ್ರದ್ಧಾಂಜಲಿ ಗೌರವ ಸಲ್ಲಿಸುವುದು ಸಂಪ್ರದಾಯ. ಈ ಬಾರಿ ಕನ್ನಡದ ಪುನೀತ್ ರಾಜ್ಕುಮಾರ್ ಮತ್ತು ಸಂಚಾರಿ ವಿಜಯ್ ಅವರಿಗೆ ಚಿತ್ರೋತ್ಸವ ಗೌರವ ಸಲ್ಲಿಸುತ್ತಿದೆ.
ಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ ಸಂಚಾರಿ ವಿಜಯ್ ಅಭಿನಯದ ತಲೆದಂಡ ಮತ್ತು ಆಕ್ಟ್ 1978 ಚಿತ್ರಗಳು ಪ್ರದರ್ಶನವಾಗುತ್ತಿದ್ದರೆ, ಪುನೀತ್ ಅವರ ಬೆಟ್ಟದ ಹೂವು ಮತ್ತು ರಾಜಕುಮಾರ ಚಿತ್ರಗಳು ಪ್ರದರ್ಶನವಾಗುತ್ತಿವೆ.