ಗರುಡ ಗಮನ ವೃಷಭ ವಾಹನ. ಚಿತ್ರದ ಟ್ರೇಲರ್ ಮತ್ತು ಹಾಡು ನೋಡಿದವರಿಗೆ ಇದು ಕೊಡುತ್ತಿರೋ ಫೀಲಿಂಗೇ ಬೇರೆ. ರಿಷಬ್ ಶೆಟ್ಟಿ ಮತ್ತು ರಾಜ್ ಬಿ.ಶೆಟ್ಟಿ ಇಬ್ಬರೂ ಇಲ್ಲಿ ಬೇರೆಯದೇ ಶೇಡ್ನಲ್ಲಿ ಕಾಣಿಸಿಕೊಳ್ತಾರೆ. ರಿಷಬ್ ಇಷ್ಟೊಂದು ಸೀರಿಯಸ್ಸಾಗಿ ಕಾಣಿಸಿಕೊಂಡಿದ್ದೇ ಇಲ್ಲ. ರಾಜ್ ಬಿ.ಶೆಟ್ಟಿ ಇಷ್ಟೊಂದು ಉಗ್ರವಾಗಿ ಕಾಣಿಸ್ತಿರೋದು ಇದೇ ಮೊದಲು.
ನಮಗೆ ಆಕ್ಚುಯಲಿ ವರವಾಗಿದ್ದು ಕೊರೊನಾ ಮತ್ತು ಲಾಕ್ ಡೌನ್. ಹೀಗಾಗಿ ಚಿತ್ರ ನಿರ್ಮಾಣದಲ್ಲಿ ಎಲ್ಲಿಯೂ ನಾವು ಅವಸರಕ್ಕೆ ಬೀಳಲಿಲ್ಲ. ನಿಧಾನವಾಗಿ ಮಾಡಿದೆವು. ಪ್ರತಿಯೊಂದನ್ನೂ ತಿದ್ದಿ ತಿದ್ದಿ ಸರಿ ಮಾಡಿಕೊಳ್ಳೋಕೆ ಸಾಕಷ್ಟು ಕಾಲಾವಕಾಶ ಸಿಗುತ್ತಾ ಹೋಯ್ತು. ನಡುವೆ ಪರಿಶೀಲಿಸಿ ಇಂಪ್ರೂವೈಸ್ ಮಾಡಿಕೊಳ್ಳೋಕೆ ಅವಕಾಶಗಳೂ ಸಿಕ್ಕವು. ಸಮಯವೂ ಸಿಕ್ಕಿತು. ಆ ದೃಷ್ಟಿಯಿಂದ ನೋಡಿದರೆ ಲಾಕ್ ಡೌನ್ ನಮಗೆ ವರವಾಯಿತು ಎನ್ನುತ್ತಾರೆ ಹೀರೋ ಕಂ ಡೈರೆಕ್ಟರ್ ರಾಜ್ ಬಿ.ಶೆಟ್ಟಿ.
ಇಷ್ಟೆಲ್ಲ ಕುತೂಹಲ ಹುಟ್ಟಿಸಿರೋ ಚಿತ್ರ ಈಗ ರಿಲೀಸ್ ಆಗಿದ್ದು, ರಕ್ಷಿತ್ ಶೆಟ್ಟಿ ಚಿತ್ರವನ್ನು ವಿತರಣೆ ಮಾಡಿದ್ದಾರೆ. ಲಾಕ್ ಡೌನ್ ನಂತರ ಜಗತ್ತಿನ ಹಲವೆಡೆ ರಿಲೀಸ್ ಆಗುತ್ತಿರೋ ಮೊದಲ ಕನ್ನಡ ಸಿನಿಮಾ ಗರುಡ ಗಮನ ವೃಷಭ ವಾಹನ.