100. ರಮೇಶ್ ಅವರು ಮೊದಲೇ ಹೇಳಿರುವಂತೆ ಇದು ಸೈಬರ್ ಕ್ರೈಂ ಬ್ಯಾಕ್ ಗ್ರೌಂಡ್ ಇರೋ ಫ್ಯಾಮಿಲಿ ಥ್ರಿಲ್ಲರ್. ಸೋಷಿಯಲ್ ಮೀಡಿಯಾ ಮೂಲಕ ಆಗಂತುಕನೊಬ್ಬ ನಮಗೇ ಗೊತ್ತಿಲ್ಲದಂತೆ ಮೊಬೈಲ್ನಲ್ಲಿ ಮನೆಯೊಳಗೆ ಎಂಟ್ರಿ ಕೊಡ್ತಾನೆ. ಆಗ ಏನೇನೆಲ್ಲ ಸಮಸ್ಯೆ ಸೃಷ್ಟಿಯಾಗುತ್ತೆ ಅನ್ನೋದನ್ನ ಥ್ರಿಲ್ಲಿಂಗ್ ಆಗಿ ಹೇಳಿದ್ದಾರಂತೆ ರಮೇಶ್ ಅರವಿಂದ್. ಚಿತ್ರವನ್ನೀಗ ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡಾ ನೋಡಿ ಮೆಚ್ಚಿ ಮಾತನಾಡಿದ್ದಾರೆ.
ಸೋಷಿಯಲ್ ಮೀಡಿಯಾ ಅನ್ನೋದು ಒಂದು ವರ. ಆದರೆ, ಯುವಜನತೆ ಅದನ್ನೇ ಶಾಪವಾಗಿ ಮಾಡಿಕೊಳ್ಳುತ್ತಿದೆ. 100 ನಿಜಕ್ಕೂ ಉತ್ತಮ ಸಿನಿಮಾ. ಸಿನಿಮಾ ಅನ್ನೋದು ಮನರಂಜನೆಯ ಜೊತೆ ಜೊತೆಗೇ ಒಂದೊಳ್ಳೆ ಸಂದೇಶವನ್ನೂ ನೀಡಬೇಕು. ಸಮಾಜದ ಕಣ್ಣು ತೆರೆಸಬೇಕು. ಆ ಕೆಲಸವನ್ನು 100 ಮಾಡಿದೆ. ಇದು ಎಲ್ಲರೂ ಅದರಲ್ಲೂ ಯುವ ಜನತೆ ನೋಡಿ ತಿಳಿದುಕೊಳ್ಳಬೇಕಾದ ಸಿನಿಮಾ ಎಂದಿದ್ದಾರೆ ಗೃಹ ಸಚಿವ ಅರಗ ಜ್ಞಾನೇಂದ್ರ.
ರಮೇಶ್ ಅವರೇ ನಿರ್ದೇಶಿಸಿರೋ ಚಿತ್ರದಲ್ಲಿ ಅವರೇ ಹೀರೋ. ಪೊಲೀಸ್ ಪಾತ್ರದಲ್ಲಿದ್ದಾರೆ. ಅವರಿಗೆ ತಂಗಿಯಾಗಿ ರಚಿತಾ ರಾಮ್, ಪತ್ನಿಯಾಗಿ ಪೂರ್ಣ ನಟಿಸಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ 100 ಈಗ ಥಿಯೇಟರಿನಲ್ಲಿದೆ.