ಸುಮಂತ್, ಜಾಕಿ ಭಾವನಾ, ಕವಿತಾ ಗೌಡ ನಟಿಸಿರೋ ಹೊಸ ಸಿನಿಮಾ ಗೋವಿಂದ ಗೋವಿಂದ. ಫುಲ್ ಕಾಮಿಡಿ ಇರೋ ಚಿತ್ರಕ್ಕೆ ರವಿ ಆರ್.ಗರಣಿ, ಎಂ.ಕೆ.ಕಿಶೋರ್ ಮತ್ತು ಎಸ್.ಶೈಲೇಂದ್ರ ಬಾಬು ಚಿತ್ರ ನಿರ್ಮಾಪಕರು. ತಿಲಕ್ ನಿರ್ದೇಶನದ ಚಿತ್ರಲ್ಲಿರೋದು ಅಪ್ಪಟ ಕಾಮಿಡಿ ಟ್ರ್ಯಾಕ್. ನವೆಂಬರ್ 26ಕ್ಕೆ ಕನ್ನಡದಲ್ಲಿ ರಿಲೀಸ್ ಆಗುತ್ತಿದೆ.
ಮಕ್ಕಳ ಮೇಲೆ ಪೋಷಕರು ಹೇರುವ ಟೆನ್ಷನ್, ಒತ್ತಡ ಮತ್ತು ಅದರಿಂದ ಹೊರಬರಲು ಅದೇ ಮಕ್ಕಳು ಮಾಡುವ ಸಾಹಸ. ಅದರಿಂದ ಸೃಷ್ಟಿಯಾಗುವ ಸಮಸ್ಯೆಗಳನ್ನು ಕಾಮಿಡಿ ಥ್ರಿಲ್ಲರ್ ಆಗಿ ಚಿತ್ರದಲ್ಲಿ ತೋರಿಸಲಾಗಿದೆ.
ದೇವ್ ರಂಗಭೂಮಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ಚಿತ್ರದಲ್ಲಿ ಭಾವನಾ ಸಿನಿಮಾ ನಟಿಯಾಗಿಯೇ ನಟಿಸಿದ್ದಾರೆ. ಅಚ್ಯುತ್ ಕುಮಾರ್, ರೂಪೇಶ್ ಶೆಟ್ಟಿ,ಮಜಾ ಟಾಕೀಸ್ ಪವನ್, ಶೋಭರಾಜ್, ವಿ.ಮನೋಹರ್, ಕಡ್ಡಿಪುಡಿ ಚಂದ್ರು ಸೇರಿದಂತೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ.