ಮುಗ್ಧನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಮೊಟ್ಟೆ ಸ್ಟಾರ್ ಆದವರು ರಾಜ್ ಬಿ.ಶೆಟ್ಟಿ. ಈಗ ಭೂಗತ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಗರುಡ ಗಮನ ವೃಷಭ ವಾಹನ ಚಿತ್ರದ ಮೂಲಕ. ಈ ಚಿತ್ರಕ್ಕೆ ಅವರೇ ಹೀರೋ. ಅವರೇ ಡೈರೆಕ್ಟರ್. ಅವರೇ ಪ್ರೊಡ್ಯೂಸರ್. ಕಥೆ ಹೊಸದಾಗಿದೆ ಎನ್ನುವ ಸಿಗ್ನಲ್ ಟ್ರೇಲರ್‍ನಲ್ಲಿ ಸಿಕ್ಕಿದೆ.
ಶಿವನನ್ನು ಭೋಲೆನಾಥ್ ಎನ್ನುತ್ತಾರೆ. ಭೋಲೆ ಎಂದರೆ ಮುಗ್ಧ ಎಂದರ್ಥ. ಹೀಗಾಗಿಯೇ ಶಿವನಿಗೆ ಮುಗ್ಧತೆ ಮತ್ತು ಕೋಪ ಬಿಟ್ಟು ಬೇರೇನೂ ಗೊತ್ತಿಲ್ಲ. ಚಿತ್ರದಲ್ಲಿ ನನ್ನ ಪಾತ್ರವೂ ಅಂತಹುದೇ. ಮುಗ್ಧ ಮತ್ತು ಸಿಟ್ಟು ಎರಡನ್ನೂ ತುಂಬಿಕೊಂಡಿರೋ ಮುಗ್ಧ ಮೃಗ. ತನ್ನ ತಂಟೆಗೆ ಬಂದವರ ಮೇಲೆ ಕ್ರೂರವಾಗಿ ದಾಳಿ ಮಾಡುವ ಮೃಗದಂತವನು ಎನ್ನುತ್ತಾರೆ ರಾಜ್ ಬಿ.ಶೆಟ್ಟಿ.
ರಿಷಬ್ ಶೆಟ್ಟಿ ಚಿತ್ರದಲ್ಲಿ ಹರಿ ಅನ್ನೋ ಪಾತ್ರ ಮಾಡಿದ್ದಾರೆ. ನನ್ನ ಪಾತ್ರ ಮತ್ತು ಅವರ ಪಾತ್ರ ಫ್ರೆಂಡ್ಸ್. ರಿಯಲ್ಲಾಗಿ ನಾವಿಬ್ಬರೂ ಫ್ರೆಂಡ್ಸ್. ಅಷ್ಟೇ ಅಲ್ಲ, ಇತ್ತೀಚೆಗೆ ಕಾಮಿಡಿ ಶೇಡ್ ಪಾತ್ರಗಳಲ್ಲೇ ಹೆಚ್ಚು ಕಾಣಿಸುತ್ತಿದ್ದ ರಿಷಬ್ ಶೆಟ್ಟಿ ಇಲ್ಲಿ ಸ್ವಲ್ಪ ಸೀರಿಯಸ್ ಆಗಿದ್ದಾರೆ. ಅವರ ಪಾತ್ರಕ್ಕೆ ಎರಡು ಶೇಡ್‍ಗಳಿವೆ ಎನ್ನುತ್ತಾರೆ ರಾಜ್ ಬಿ.ಶೆಟ್ಟಿ. ಸಿನಿಮಾ ರಿಲೀಸ್ ಆಗೋಕೆ ಸಮಯ ಫಿಕ್ಸ್ ಆಗಿದೆ. ವೇಯ್ಟ್ & ಸೀ.