ಶರಣ್, ಅಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿರುವ ಚಿತ್ರ ಅವತಾರ ಪುರುಷ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ.. ಎರಡು ಭಾಗಗಳಲ್ಲಿ ಬರುತ್ತಿರೋ ಚಿತ್ರದ ಭಾಗ 1, ಅವತಾರ ಪುರುಷ ಅಷ್ಟದಿಗ್ಬಂಧನ ಮಂಡಲಕ ಡಿಸೆಂಬರ್ 10ಕ್ಕೆ ರಿಲೀಸ್ ಆಗುತ್ತಿದೆ. ಸಿಂಪಲ್ ಸುನಿ ನಿರ್ದೇಶನ ಮಾಡಿರುವ ಚಿತ್ರದಲ್ಲಿ ಹಾರರ್ ಕಾಮಿಡಿ ಸ್ಟೋರಿ ಇದೆ.
ಶರಣ್ ಚಿತ್ರ ಎಂದ ಮೇಲೆ ಕಾಮಿಡಿ ಇರಲೇಬೇಕು. ಸಿಂಪಲ್ ಸುನಿ ಚಿತ್ರದಲ್ಲಿ ತುಂಟಾಟ ತರಲೆ ಇರಲೇಬೇಕು. ಜೊತೆಗೆ ಈ ಬಾರಿ ಹಾರರ್ ಟಚ್ ಕೂಡಾ ಇದೆ. ಚುಟುಚುಟು ಹಿಟ್ ಆದನಂತರ ಶರಣ್ ಮತ್ತು ಅಶಿಕಾ ರಂಗನಾಥ್ ಒಟ್ಟಿಗೇ ನಟಿಸಿರುವ ಚಿತ್ರ ಅವತಾರಪುರುಷ. ಸುಧಾರಾಣಿ, ಸಾಯಿಕುಮಾರ್, ಶ್ರೀನಗರ ಕಿಟ್ಟಿ, ಭವ್ಯಾ ಮೊದಲಾದವರು ನಟಿಸಿರೋ ಚಿತ್ರದಲ್ಲಿ ಶರಣ್ ಜ್ಯೂ.ಆರ್ಟಿಸ್ಟ್ ಆಗಿ ನಟಿಸಿದ್ದಾರೆ.