ಗರುಡ ಗಮನ ವೃಷಭ ವಾಹನ. ತನ್ನ ಟೈಟಲ್ಲಿನಿಂದಲೇ ಕುತೂಹಲ ಹುಟ್ಟಿಸಿದ್ದ ಚಿತ್ರ. ಶೆಟ್ಟಿ + ಶೆಟ್ಟಿ ಕಾಂಬಿನೇಷನ್ ಸಿನಿಮಾ. ಯೆಸ್, ಇದು ರಿಷಬ್ ಶೆಟ್ಟಿ ಮತ್ತು ರಾಜ್ ಬಿ. ಶೆಟ್ಟಿ ಜೊತೆಯಾಗಿ ನಟಿಸಿರೋ ಸಿನಿಮಾ. ಚಿತ್ರದ ನಿರ್ದೇಶಕರೂ ಸ್ವತಃ ರಾಜ್ ಬಿ.ಶೆಟ್ಟಿ. ಪ್ರೇಕ್ಷಕರ ಬಾಯಲ್ಲಿ ಗರುಡ ಗಮನ ವೃಷಭ ವಾಹನ ಅನ್ನೋ ಟೈಟಲ್ ಈಗ ಸಿಂಪಲ್ಲಾಗಿ ಜಿಜಿವಿವಿ ಆಗಿ ಹೋಗಿದೆ. ಈ ಚಿತ್ರವೀಗ ನವೆಂಬರ್ 19ರಂದು ತೆರೆಗೆ ಬರುತ್ತಿದೆ.
ಈಗಾಗಲೇ ಚಿತ್ರದ ಟ್ರೇಲರ್ ಹೊರಬಿದ್ದಿದೆ. ರೆಗ್ಯುಲರ್ ಸ್ಟೈಲ್‍ಗಿಂತ, ಶೈಲಿಗಿಂತ ಬೇರೆಯದೇ ಆದ ಸಿನಿಮಾ ಈ ಜಿಜಿವಿವಿ ಅನ್ನೋ ಫೀಲಿಂಗ್ ಕೊಟ್ಟಿದೆ ಚಿತ್ರದ ಟ್ರೇಲರ್. ಗ್ಯಾಂಗ್‍ಸ್ಟರ್, ಫ್ರೆಂಡ್‍ಶಿಪ್ ಮತ್ತು ಗ್ಯಾಂಗ್‍ವಾರ್.. ಎಲ್ಲವನ್ನೂ ಕರಾವಳಿ ಬ್ಯಾಕ್‍ಗ್ರೌಂಡ್‍ನಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ ಮೊಟ್ಟೆ ಸ್ಟಾರ್ ರಾಜ್ ಬಿ.ಶೆಟ್ಟಿ.
ರಿಷಬ್ ಮತ್ತು ರಾಜ್ ಇಬ್ಬರ ಕಾಂಬಿನೇಷನ್ನೇ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸುವಂತೆ ಮಾಡಿದೆ.