ಪ್ರೇಮಂ ಪೂಜ್ಯಂ ಚಿತ್ರ ರಿಲೀಸ್ ಆಗಿದೆ. ಸಿನಿಮಾ ನೋಡಿದವರ ಪ್ರಕಾರ ಈ ಚಿತ್ರಕ್ಕೆ ಮೂವರು ಹೀರೋಗಳು. ಲವ್ಲೀ ಸ್ಟಾರ್ ಪ್ರೇಮ್, ಡೈರೆಕ್ಟರ್ ರಾಘವೇಂದ್ರ ಮತ್ತು ಕ್ಯಾಮೆರಾಮನ್ ನವೀನ್ ಕುಮಾರ್. ಇಡೀ ಚಿತ್ರವನ್ನು ಒಂದು ಸುಂದರ ಪೇಂಯ್ಟಿಂಗ್ನಂತೆ ಕಟ್ಟಿಕೊಟ್ಟಿರೋ ನವೀನ್ ಕುಮಾರ್ ಬಗ್ಗೆ ಪ್ರೇಕ್ಷಕರಷ್ಟೇ ಅಲ್ಲ, ಸಿನಿಮಾ ತಾರೆಗಳೂ ಚೆಂದದ ಮಾತನ್ನಾಡುತ್ತಿದ್ದಾರೆ. ಎಲ್ಲರಿಗೂ ಸಿನಿಮಾ ಇಷ್ಟವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರೀತಿಯನ್ನು ಹೆಂಗೆಂಗೋ ತೋರಿಸಿ ಹುಚ್ಚು ಹಿಡಿಸುತ್ತಿರುವಾಗ.. ಪ್ರೀತಿಯೇ ದೇವರು ಎಂದು ತೋರಿಸಿರುವ ರಾಘವೇಂದ್ರ ಅವರ ಸ್ಟೈಲ್ ಇಷ್ಟವಾಗಿದೆ. ಪ್ರೇಮ್ ಇನ್ನಷ್ಟು ಯಂಗ್ ಆಗಿದ್ದಾರೆ.
ಪ್ರೇಮ್ ಅವರ ತಂದೆ : ನನಗಂತೂ ಸಿನಿಮಾ ಸಖತ್ ಇಷ್ಟವಾಯ್ತು. ಪುಟ್ಟಣ್ಣ ಕಣಗಾಲ್ ಅವರಂತೆ ಸಿನಿಮಾ ಮಾಡಿದ್ದಾರೆ ಡೈರೆಕ್ಟರ್.
ಪ್ರೇಮ್ : ಎಲ್ಲರೂ ಕಣ್ಣೀರಿಡುತ್ತಿದ್ದಾರೆ. ನನ್ನ ಮಗಳನ್ನೂ ಸಿನಿಮಾ ನೋಡೋಕೆ ಕರ್ಕೊಂಡ್ ಬರ್ತೀನಿ.
ಬೃಂದಾ ಆಚಾರ್ಯ : ಬೇರೆ ಸಿನಿಮಾಗಳನ್ನು ಒಪ್ಪಿಕೊಳ್ಳದೆ 100% ಈ ಚಿತ್ರಕ್ಕೆ ಕಮಿಟ್ ಆಗಿದ್ದೆ. ಅದಕ್ಕೆ ಫಲ ಸಿಕ್ಕಿದೆ. ನನ್ನ ತಮ್ಮ ಸಿನಿಮಾ ನೋಡಿ ಅಳುತ್ತಿದ್ದ.
ಶರಣ್ : ಇತ್ತೀಚಿನ ದಿನದಲ್ಲಿ ನಾನು ನೋಡಿದ ಅದ್ಭುತ ಪ್ರೇಮಕಾವ್ಯ ಪ್ರೇಮಂ ಪೂಜ್ಯಂ.
ಖುಷಿ (ದಿಯಾ ಖ್ಯಾತಿ) : ಪ್ರೇಮ್ ಸರ್ಗೆ ಏಜ್ ಕಡಿಮೆ ಆಗ್ತಾ ಇದೆ. ಪವಿತ್ರವಾದ ಪ್ರೀತಿ ಹೇಗಿರುತ್ತೆ ಅನ್ನೋದನ್ನ ಅದ್ಭುತವಾಗಿ ತೋರಿಸಿದ್ದಾರೆ.
ಭಾವನಾ : ತುಂಬಾ ದಿನಗಳ ನಂತರ ಒಂದು ಸುಂದರ ಚಿತ್ರ ನೋಡಿದೆ. ನನಗೆ ತುಂಬಾ ಖುಷಿ ಆಯ್ತು.
ಪ್ರಥಮ್ : ನೀವೂ ಬನ್ನಿ, ನಿಮ್ಮ ಗರ್ಲ್ಫ್ರೆಂಡ್ನೂ ಕರ್ಕೊಂಡ್ ಬನ್ನಿ.
ಕಾರುಣ್ಯ ರಾಮ್ : ಎಲ್ಲ ಹುಡುಗಿಯರಿಗೂ ಈ ಥರಾ ಹುಡುಗ ಸಿಗಬೇಕು. ಲವ್ ಹಿಂಗಿರುತ್ತಾ ಅನ್ನೋದೇ ಖುಷಿ ಕೊಡುತ್ತೆ..
ಹೀಗೆ ಚಿತ್ರ ನೋಡಿದ ಎಲ್ಲರೂ ಚಿತ್ರವನ್ನು ಹಾಡಿ ಹೊಗಳಿದ್ದಾರೆ. ತರುಣ್ ಸುಧೀರ್, ಅನು ಪ್ರಭಾಕರ್, ಮಾಸ್ಟರ್ ಆನಂದ್.. ಹೀಗೆ ಚಿತ್ರವನ್ನು ನೋಡಿದ ಎಲ್ಲರಿಗೂ ಚಿತ್ರದ ಕಾನ್ಸೆಪ್ಟ್ ಇಷ್ಟವಾಗಿದೆ. ಡಾಕ್ಟರ್ ರಾಘವೇಂದ್ರ ಗೆದ್ದಿದ್ದಾರೆ.