ಪ್ರೇಮಂ ಪೂಜ್ಯಂ. ಈಗ ಥಿಯೇಟರಿನಲ್ಲಿರೋ ಸಿನಿಮಾದಲ್ಲಿರೋದು ಒಂದು ಅಪ್ಪಟ ಲವ್ ಸ್ಟೋರಿ. ಲವ್ ಸ್ಟೋರಿ ಎಂದರೆ ಅಂತಿಂತಾ ಲವ್ ಸ್ಟೋರಿ.. ಟೈಟಲ್ಲಿಗೆ ತಕ್ಕಂತೆ ಪ್ರೀತಿ ಎಂದರೆ ಪೂಜಿಸಲೇಬೇಕು ಎನ್ನಿಸುವಂತಾ ಲವ್ ಸ್ಟೋರಿ. ಒಂದು ಪವಿತ್ರ ಪ್ರೇಮ ಕಥೆ.
ಶೆರ್ಲಿನ್‍ಳನ್ನು ಮೊದಲ ನೋಟದಲ್ಲೇ ಪ್ರೀತಿಸುವ ಶ್ರೀಹರಿಗೆ, ಅವಳೆಂದರೆ ಅಂಬಾರಿಯೊಳಗಿನ ದೇವತೆಯಷ್ಟೇ ಭಕ್ತಿ ಮತ್ತು ಪ್ರೀತಿ. ಈ ಶ್ರೀಹರಿಗೊಬ್ಬ ಗೆಳೆಯ ಮಾಸ್ಟರ್ ಆನಂದ್. ಕೊನೆಗೆ ಬರೋದು ಐಂದ್ರಿತಾ ರೇ. ಕಚಗುಳಿ ಇಡೋಕೆ ತಲೈವಾ ಸಾಧು. ಫೈನಲೀ... ಹೀರೋಗೆ ಪ್ರೀತಿ ಸಿಕ್ಕಿತಾ.. ಇಲ್ವಾ.. ಅದನ್ನ ತಿಳ್ಕೊಳ್ಳೋಕೆ ಥಿಯೇಟರಿಗೇ ಹೋಗಬೇಕು. ರಾಘವೇಂದ್ರ ಅವರ ನಿರ್ದೇಶನದ ಮೊದಲ ಚಿತ್ರವಿದು. ಡಾಕ್ಟರುಗಳೆಲ್ಲ ಒಟ್ಟಾಗಿ ಸೇರಿಕೊಂಡು.. ಡಾಕ್ಟರುಗಳ ಲವ್ ಸ್ಟೋರಿ ಹೇಳಿದ್ದಾರೆ. ಲವ್ ಅನ್ನೋದು ಹಾರ್ಟಿಗೆ ಸಂಬಂಧಪಟ್ಟಿರೋದ್ರಿಂದ ಇದನ್ನು ಎದೆ ಬಡಿತ ಹೇಳೋ ಪ್ರೇಮಕಥೆ ಎನ್ನಬಹುದು. ಪ್ರೀತಿಸಿ.. ಪ್ರೇಮಿಸಿ.. ಪೂಜಿಸಿ..