ಐ ಲವ್ ಯೂ ಚಿತ್ರದಲ್ಲಿ ರಚಿತಾ ರಾಮ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಒಂದಿಷ್ಟು ವಿವಾದ.. ಮತ್ತೊಂದಿಷ್ಟು ಕಣ್ಣೀರು.. ಕ್ಷಮೆ.. ಇತ್ಯಾದಿ ಇತ್ಯಾದಿಗಳಾಗಿದ್ದವು. ಇನ್ನು ಮುಂದೆ ನಾನು ಬೋಲ್ಡ್ ಅವತಾರದಲ್ಲಿ ಕಾಣಿಸೋದಿಲ್ಲ ಎಂದಿದ್ದ ರಚಿತಾ, ಈಗ ಲವ್ ಯೂ ರಚ್ಚು ಚಿತ್ರದಲ್ಲಿ ಬೋಲ್ಡ್ ಆಗಿದ್ದಾರೆ. ನೋಡುವವರನ್ನೂ ಬೌಲ್ಡ್ ಮಾಡಿದ್ದಾರೆ. ಇದು ಲವ್ ಯೂ ರಚ್ಚು ಚಿತ್ರದ ಹಾಡಿನ ಝಲಕ್.
ಮುದ್ದು ನೀನು.. ಅನ್ನೋ ಹಾಡು ಹೊರಬಂದಿದೆ. ಅಜೇಯ್ ರಾವ್ ಮತ್ತು ರಚಿತಾ ರಾಮ್ ನಟಿಸಿರೋ ಚಿತ್ರವಿದು. ಗುರು ದೇಶಪಾಂಡೆ ನಿರ್ಮಾಣದ ಚಿತ್ರಕ್ಕೆ ಶಂಕರ್ ರಾಜ್ ನಿರ್ದೇಶಕ. ಈ ಮುದ್ದು ನೀನು ಹಾಡಿನಲ್ಲೇ ರಚಿತಾ ರಾಮ್ ಮುದ್ದು ಮುದ್ದಾಗಿ.. ಬೋಲ್ಡ್ ಆಗಿ ಕಾಣಿಸಿರೋದು. ಲವ್ ಮೇಕಿಂಗ್ ದೃಶ್ಯಗಳಿರೋ ಹಾಡಿನಲ್ಲಿ ರಚಿತಾ ರಾಮ್ ಕಿಕ್ಕೇರಿಸುತ್ತಿದ್ದಾರೆ. ಅಫ್‍ಕೋರ್ಸ್.. ಐ ಲವ್ ಯೂ ನಂತರ ರಚಿತಾ ರಾಮ್, ಏಕ್ ಲವ್ ಯಾದಲ್ಲಿ ಲಿಪ್ ಲಾಕ್ ಕೂಡಾ ಮಾಡಿದ್ದಾರೆ. ನಟನೆ ಅಂದ ಮೇಲೆ ಎಲ್ಲವನ್ನೂ ಮಾಡಬೇಕು. ತಪ್ಪೇನೂ ಇಲ್ಲ. ಮತ್ತೊಮ್ಮೆ ವಿವಾದವಾಗಬಾರದಷ್ಟೆ..