ಒಂದಲ್ಲ.. ಎರಡಲ್ಲ.. 134 ಬಂದೂಕುಗಳು, 500 ಮೀಟರ್ ದೂರದವರೆಗೆ ಚಿಮ್ಮಬಲ್ಲ ರಾಕೆಟ್ ಲಾಂಚರುಗಳು, ರಿವಾಲ್ವರುಗಳು.. ಅಬ್ಬಾ.. ಒಂದು ಪುಟ್ಟ ಯುದ್ಧವನ್ನೇ ಮಾಡುವಷ್ಟು ಆಯುಧ, ಶಸ್ತ್ರಾಸ್ತ್ರಗಳನ್ನು ತರಿಸಿ ರೆಡಿಯಾಗುತ್ತಿದ್ದಾರೆ ಆರ್.ಚಂದ್ರು. ಇದು ಕಬ್ಜ ಚಿತ್ರದ ಸಣ್ಣ ಝಲಕ್ಕು.
ಇದು ಅಂಡರ್‍ವಲ್ರ್ಡ್ ಚಿತ್ರವಾದರೂ, ಕಥೆ ಮತ್ತು ಟ್ರೀಟ್‍ಮೆಂಟ್ ಬೇರೆಯದು. 40-50 ಕೆಜಿ ತೂಕದ ಬಂದೂಕು, ಮೆಷಿನ್ ಗನ್ನುಗಳು, ಒಂದ್ಸಲ ಟ್ರಿಗರ್ ಒತ್ತಿದರೆ 250 ಬುಲೆಟ್ ಚಿಮ್ಮುತ್ತವೆ.. ಇಂತಹವನ್ನೆಲ್ಲ ಚಿತ್ರದಲ್ಲಿ ಬಳಸುತ್ತಿದ್ದೇವೆ. ಇವುಗಳನ್ನು ಚಿತ್ರದ ವಾರ್ ದೃಶ್ಯಗಳಿಗೆ ಬಳಸುತ್ತೇವೆ ಎನ್ನುತ್ತಾರೆ ಚಂದ್ರು. ಹೌದು.. ಸಾಹಸ ದೃಶ್ಯಗಳಲ್ಲ, ಖಂಡಿತಾ ಯುದ್ಧದ ಸನ್ನಿವೇಶಗಳೇ.
ಉಪೇಂದ್ರ, ಸುದೀಪ್ ಮತ್ತೊಮ್ಮೆ ಒಟ್ಟಿಗೇ ನಟಿಸುತ್ತಿರುವ ಚಿತ್ರದಲ್ಲಿ ಬಹುಭಾಷಾ ಕಲಾವಿದರ ಸೈನ್ಯವನ್ನೇ ಒಂದೆಡೆ ಕಲೆಹಾಕಿದ್ದಾರೆ ಆರ್.ಚಂದ್ರು. ಮಿನರ್ವ ಮಿಲ್‍ನಲ್ಲಿ ಚಿತ್ರೀಕರಣ ನಡೆಯುತ್ತಿದೆ.