` ವಿಯೆಟ್ನಾಂನಲ್ಲಿ ಚಿತ್ರೀಕರಣಗೊಂಡ ಫಸ್ಟ್ ಮೂವಿ ಪ್ರೇಮಂ ಪೂಜ್ಯಂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವಿಯೆಟ್ನಾಂನಲ್ಲಿ ಚಿತ್ರೀಕರಣಗೊಂಡ ಫಸ್ಟ್ ಮೂವಿ ಪ್ರೇಮಂ ಪೂಜ್ಯಂ
Premam Poojyam Movie Image

ವಿಯೆಟ್ನಾಂ ಅನ್ನೋ ದೇಶದ ಹೆಸರು ಕನ್ನಡಿಗರಿಗೆ ಬಹುತೇಕರಿಗೆ ಗೊತ್ತಿಲ್ಲ. ಗೊತ್ತಿದ್ದವರಿಗೆ ಶೀತಲ ಸಮರದ ಯುದ್ಧದ ಕಾರಣದಿಂದಾಗಿ ಗೊತ್ತಷ್ಟೆ.. ಆ ದೇಶದಲ್ಲೀಗ ಪ್ರೇಮಂ ಪೂಜ್ಯಂ ಟೀಂ, ಶೂಟಿಂಗ್ ಮಾಡಿರುವುದೇ ವಿಶೇಷ. ಪ್ರೇಮ್ ಮತ್ತು ಬೃಂದಾ ಆಚಾರ್ಯ ನಡುವಿನ ರೊಮ್ಯಾಂಟಿಕ್ ದೃಶ್ಯಗಳ ಚಿತ್ರೀಕರಣಕ್ಕೆ ವಿಯೆಟ್ನಾಂನ ಮಾಂಗ್ ಕಾಯ್`ಗೆ ತೆರಳಿತ್ತಂತೆ ಚಿತ್ರತಂಡ.

ಅಲ್ಲಿ ಎಲ್ಲವೂ ಮಂಜು. ನೋಡೋಕೆ ಬ್ಯೂಟಿಫುಲ್. ಆದರೆ.. ಎಷ್ಟೋ ಬಾರಿ ಸೂರ್ಯದ ದರ್ಶನವೇ ಆಗುತ್ತಿರಲಿಲ್ಲ. ಹೀಗಾಗಿ ಹಗಲು ಹೊತ್ತಿನಲ್ಲೇ ಲೈಟ್ ಬಳಸಿ ಶೂಟ್ ಮಾಡಿದ್ದೇವೆ ಎನ್ನುತ್ತಾರೆ ಕೊರಿಯೋಗ್ರಾಫರ್ ನವೀನ್ ಕುಮಾರ್.

ಮಾಂಗ್ ಕಾಯ್ ಪ್ರದೇಶ ಬರೋದು ವಿಯೆಟ್ನಾಂ-ಚೀನಾ ಬಾರ್ಡರ್‍ನಲ್ಲಂತೆ. ಅಲ್ಲಿಗೆ ಫ್ಲೈಟುಗಳಿಲ್ಲ. ಕಾರಿನಲ್ಲೇ ಹೋಗಬೇಕು. ಅದೂ 600 ಕಿ.ಮೀ. ದೂರ. 60 ಜನರ ತಂಡ ಮತ್ತು ಚಿತ್ರೀಕರಣದ ಉಪಕರಣಗಳು.. ಒಂದೊಂದು ಸೀನ್ ಕೂಡಾ ಅಷ್ಟೇ ಶ್ರಮ ಬೇಡುತ್ತದೆ ಎನ್ನುತ್ತಾರೆ ನವೀನ್. ಆ ಶ್ರಮಕ್ಕೆ ಪ್ರತಿಫಲವೂ ಸಿಕ್ಕಿದೆ. ಒಂದೊಂದು ಸೀನ್ ಕೂಡಾ ಪೈಂಟಿಂಗ್‍ನಂತೆ ಬಂದಿದೆ ಅನ್ನೋ ಖುಷಿ ನಿರ್ದೇಶಕ ಡಾ.ರಾಘವೇಂದ್ರ ಅವರಿಗೆ ಇದೆ. ಇದು ವೈದ್ಯರುಗಳೇ ಒಟ್ಟಾಗಿ ಸೇರಿ ನಿರ್ಮಿಸಿ, ನಿರ್ದೇಶಿಸ್ತಿರೋ ಸಿನಿಮಾ. ಒಂಥರಾ ಡಾಕ್ಟರ್ ಲವ್ ಸ್ಟೋರಿ.