ಮುರುಘಾ ಮಠ ಪ್ರತೀ ವರ್ಷ ನೀಡುವ ಬಸವಶ್ರೀ ಪುರಸ್ಕಾರವನ್ನು ಪುನೀತ್ ರಾಜ್‍ಕುಮಾರ್ ಅವರಿಗೆ ನೀಡಲು ಮುಂದಾಗಿದೆ. 2022ರ ಬಸವಶ್ರೀ ಪುರಸ್ಕಾರವನ್ನು ಚಿತ್ರದುರ್ಗದ ಮುರುಘಾಮಠ ಪುನೀತ್ ಅವರಿಗೆ ಘೋಷಿಸಿದೆ. ಸ್ವತಃ ಮುರುಘಾ ಶರಣರು ಪ್ರಶಸ್ತಿ ಘೋಷಿಸಲಿದ್ದಾರೆ.
2022ರ ಬಸವ ಜಯಂತಿ ದಿನ ಈ ಕಾರ್ಯಕ್ರಮ ನಡೆಯಲಿದ್ದು, ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಶಿವಣ್ಣ, ರಾಘಣ್ಣ ಸೇರಿದಂತೆ ರಾಜ್ ಕುಟುಂಬ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.
ತಮ್ಮ ನಟನೆ, ಸೇವೆಗಳಿಂದ ಪುನೀತ್ ಈ ಪುರಸ್ಕಾರಕ್ಕೆ ಖಂಡಿತಾ ಪಾತ್ರರಾಗುತ್ತಿದ್ದರು. ಹೀಗಾಗಿ ಮರಣೋತ್ತರವಾಗಿ ಪುನೀತ್ ಅವರಿಗೆ ಗೌರವ ನೀಡುತ್ತಿದ್ದೇವೆ ಎಂದು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಘೋಷಿಸಿದ್ದಾರೆ. ಪ್ರಶಸ್ತಿ 5 ಲಕ್ಷ ರೂ. ನಗದು ಹೊಂದಿದೆ.ಅನುಭವ ಮಂಟಪದಲ್ಲಿ ಕಾರ್ಯಕ್ರಮ ನೆರವೇರಲಿದೆ.