ತಮಿಳು ನಟ ವಿಜಯ್ ಸೇತುಪತಿ ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಲೆಂದು ಬಂದಿದ್ದಾಗ ಅವರ ಮೇಲೆ ಹಲ್ಲೆ ನಡೆದಿದೆ. ಕೆಂಪೇಗೌಡ ಏರ್‍ಪೋರ್ಟ್‍ನಲ್ಲಿ ಹಲ್ಲೆಯಾಗಿದೆ. ಇದಕ್ಕೆಲ್ಲ ಕಾರಣವಾಗಿರೋದು ಮಾತ್ರ ಸೆಲ್ಫಿ ಕಿರಿಕ್ಕು... ಮತ್ತು ಹೊಟ್ಟೆ ತುಂಬಾ ತುಂಬಿಸಿಕೊಂಡು ಏರಿದ್ದ ಕಿಕ್ಕು.
ವಿಮಾನದಲ್ಲಿ ಬರುವಾಗ ಮಹಾಗಾಂಧಿ ಎಂಬ ವ್ಯಕ್ತಿ ವಿಜಯ್ ಸೇತುಪತಿ ಅವರ ಜೊತೆ ಮಾತಿಗಿಳಿದಿದ್ದಾನೆ. ಆತನೂ ತಮಿಳಿನಲ್ಲಿ ಕಿರುತೆರೆ ನಟನಂತೆ. ಮದ್ಯದ ಅಮಲಿನಲ್ಲಿಯೇ ಸೆಲ್ಫಿಗೆ ಮುಗಿಬಿದ್ದಿದ್ದಾನೆ. ಈ ವೇಳೆ ವಿಜಯ್ ಸೇತುಪತಿ ಅವರ ಪಿಎ ಮತ್ತು ಗೆಳೆಯ ಜಾನ್ ಅಡ್ಡಿ ಮಾಡಿದ್ದಾನೆ.
ವಿಮಾನ ಇಳಿದು ಶಿವರಾಜ್ ಕುಮಾರ್ ಮನೆಗೆ ಹೋಗಲು ಸಿದ್ಧರಾಗುತ್ತಿರುವಾಗ ಮಹಾಗಾಂಧಿ ಹಿಂದಿನಿಂದ ಬಂದು ಜಾನ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಕೊನೆಗೆ ಪೊಲೀಸರ ಮಧ್ಯಪ್ರವೇಶದಿಂದ ಗಲಾಟೆ ಬಗೆಹರಿದಿದೆ. ಇಬ್ಬರೂ ಪರಸ್ಪರ ಕ್ಷಮೆ ಕೇಳಿದ್ದಾರೆ. ಆದರೆ.. ವಿಡಿಯೋ ಈಗ ಎಲ್ಲೆಲ್ಲೂ ವೈರಲ್.