` ಅಪ್ಪು ಓದಿಸುತ್ತಿದ್ದ ಮಕ್ಕಳ ಜವಾಬ್ದಾರಿ ನನ್ನದು : ತಮಿಳು ನಟ ವಿಶಾಲ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಪ್ಪು ಓದಿಸುತ್ತಿದ್ದ ಮಕ್ಕಳ ಜವಾಬ್ದಾರಿ ನನ್ನದು : ತಮಿಳು ನಟ ವಿಶಾಲ್
Vishal. Puneeth Rajkumar

ಪುನೀತ್ ರಾಜ್‍ಕುಮಾರ್ ಅಗಲಿಕೆ ನಂತರ ಹೊರಬಂದ ಸುದ್ದಿ ಅವರು ಓದಿಸುತ್ತಿದ್ದ 1800+ ಮಕ್ಕಳ ವಿದ್ಯಾಭ್ಯಾಸದ ಕಥೆ. ಇನ್ನು ಅವರ ಸಮಾಜಸೇವೆಯ ಬಗ್ಗೆ ಹೇಳುವಂತೆಯೇ ಇಲ್ಲ. ಪುನೀತ್ ತಾವು ನೀಡುತ್ತಿದ್ದ ನೆರವು, ಮಾಡುತ್ತಿದ್ದ ಸಹಾಯಗಳ ಬಗ್ಗೆ ಹೇಳಿಕೊಳ್ಳುತ್ತಿರಲಿಲ್ಲ. ನೆರವು ಪಡೆದವರಿಗೂ ಹೇಳೋಕೆ ಬಿಡುತ್ತಿರಲಿಲ್ಲ. ನಿಧನದ ವೇಳೆ ಕೆಲವೊಂದಿಷ್ಟು ಜನ ಬಹಿರಂಗವಾಗಿ ಹೇಳಿಕೊಂಡರು. ಈ ವೇಳೆ ಹೊರಬಿದ್ದ ಸತ್ಯವೇ 1800+ ವಿದ್ಯಾರ್ಥಿಗಳ ಉಚಿತ ವಿದ್ಯಾಭ್ಯಾಸದ ಕಥೆ.

ಅವರೆಲ್ಲರ ವಿದ್ಯಾಭ್ಯಾಸದ ಹೊಣೆ ನನ್ನದು ಎಂದು ಮುಂದೆ ಬಂದಿದ್ದಾರೆ ತಮಿಳು ನಟ ವಿಶಾಲ್. ಒಂದು ಸರ್ಕಾರ ಮಾಡಬೇಕಾದಷ್ಟು ಕೆಲಸವನ್ನು ಪುನೀತ್ ಒಬ್ಬರೇ ಮಾಡುತ್ತಿದ್ದರು. ನನಗವರು ಬಹಳ ವರ್ಷಗಳಿಂದ ಪರಿಚಯ. ಇನ್ನು ಮುಂದೆ ಆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹೊಣೆ ನನ್ನದು ಎಂದಿದ್ದಾರೆ