ನಾಳೆ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ. ರಾಜ್ ಮತ್ತು ಪಾರ್ವತಮ್ಮನವರ ಸಮಾಧಿ ಪಕ್ಕದಲ್ಲಿಯೇ ಪುನೀತ್ ಅವರ ಸಂಸ್ಕಾರವೂ ನೆರವೇರಲಿದೆ. ಅಲ್ಲಿಯೇ ಸಮಾಧಿ ನಿರ್ಮಾಣವಾಗಲಿದೆ.
ಪುನೀತ್ ಅವರಿಗೆ ಗಂಡು ಮಕ್ಕಳಿಲ್ಲ. ಹೀಗಾಗಿ ರಾಘವೇಂದ್ರ ರಾಜ್ಕುಮಾರ್ ಅವರ ಹಿರಿಯ ಮಗ ವಿನಯ್ ರಾಜ್ಕುಮಾರ್ ಚಿಕ್ಕಪ್ಪನ ಅಂತ್ಯ ಸಂಸ್ಕಾರದ ವಿಧಿ ವಿಧಾನ ನೆರವೇರಿಸಲಿದ್ದಾರೆ. ವಿನಯ್
ಮತ್ತು ಗುರು (ಯುವರಾಜ್) ಬಗ್ಗೆ ಪುನೀತ್ ಅವರಿಗೆ ವಿಶೇಷ ಪ್ರೀತಿಯಿತ್ತು. ಮನೆಗೆ ಬರುವವರೆಗೆ ಯುವರಾಜ್ ಅವರಿಗಂತೂ ಚಿಕ್ಕಪ್ಪ ಮೃತಪಟ್ಟಿದ್ದಾರೆ ಎಂಬ ವಿಷಯವೇ ಗೊತ್ತಿರಲಿಲ್ಲ.
ಸಮಾಧಿಯನ್ನು ತೆಗೆದ ನಂತರ ತುಂಬಾ ಹೊತ್ತು ಹಾಗೆಯೇ ಬಿಡುವಂತಿಲ್ಲ. ಹೀಗಾಗಿ ಇನ್ನೂ ಒಂದು ಅಡಿ ಸಮಾಧಿಯ ಗುಂಡಿ ತೋಡುವ ಕೆಲಸವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಅಂತ್ಯ ಸಂಸ್ಕಾರ ಶುರುವಾಗುವ ಮುನ್ನ ಉಳಿದ ಒಂದು ಅಡಿ ಗುಂಡಿಯನ್ನು ಅಗೆಯಲಾಗುತ್ತದೆ.
ಇಡೀ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಪುನೀತ್ ಅವರ ಮಗಳು ಧೃತಿ ಅಮೆರಿಕದಿಂದ ಬಂದ ನಂತರ ಅಂತ್ಯ ಸಂಸ್ಕಾರದ ಸಮಯ ನಿರ್ಧಾರವಾಗಲಿದೆ.