ಶನಿವಾರವೇ ಅಂತ್ಯಕ್ರಿಯೆ ಎಂದುಕೊಂಡಿದ್ದ ಯೋಜನೆಯನ್ನು ಒಂದು ದಿನ ಮುಂದೂಡಿದೆ. ಪುನೀತ್ ದೊಡ್ಡ ಮಗಳು ಧೃತಿ, ನ್ಯೂಯಾರ್ಕ್ನಿಂದ ಬಂದು ಬೆಂಗಳೂರು ತಲುಪುವುದರೊಳಗೆ ಸಂಜೆಯಾಗುತ್ತೆ. ರಾತ್ರಿ ಹೊತ್ತು ಅಂತ್ಯಕ್ರಿಯೆ ಮಾಡುವಂತಿಲ್ಲ. ಹೀಗಾಗಿ ಅಂತ್ಯ ಸಂಸ್ಕಾರವನ್ನು ಭಾನುವಾರಕ್ಕೆ ಮುಂದೂಡಿದ್ದೇವೆ. ದಯವಿಟ್ಟು ಶಾಂತಿಯಿಂದ ಸಹಕರಿಸಿ ಎಂದು ಹೇಳಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ.
ಎಲ್ಲರೂ ನೊಂದಿದ್ದೀರಿ. ನಾವೂ ನೊಂದಿದ್ದೇವೆ. ದೊಡ್ಡ ಮಗಳು ಬರಬೇಕಿದೆ. ಅವಳು ನನ್ನನ್ನು ಅಪ್ಪಾ ಎನ್ನುತ್ತಿದ್ದಳು. ಅಪ್ಪುನನ್ನು ಪಪ್ಪಾ ಎನ್ನುತ್ತಿದ್ದಳು. ಅವಳು ಬಂದು ಅಪ್ಪಾ.. ಪಪ್ಪಾ ಎಲ್ಲಿ ಅಂದ್ರೆ ನಾನು ಏನು ಹೇಳಲಿ.. ಎಲ್ಲಿಗೆ ಕಳಿಸಿದೆ ಅಂದ್ರೆ ಏನು ಮಾಡಲಿ.. ಆ ಮಗು ಇನ್ನೂ ಎಷ್ಟು ಅಳುತ್ತೋ ಏನೋ.. ಗದ್ಗದಿತರಾಗಿಯೇ ಹೇಳಿದ್ಧಾರೆ ರಾಘವೇಂದ್ರ ರಾಜ್ಕುಮಾರ್.
ನಾಳೆ ಕಂಠೀರವ ಸ್ಟುಡಿಯೋದಲ್ಲಿ ರಾಜ್, ಪಾರ್ವತಮ್ಮ ಸಮಾಧಿ ಪಕ್ಕದಲ್ಲಿಯೇ ಪುನೀತ್ ಸಂಸ್ಕಾರ ನೆರವೇರಲಿದೆ.