ಪಾತ್ರದ ಬಗ್ಗೆ ಹೇಳಿದಾಗ ನನಗೆ ಕಾನ್ಫಿಡೆನ್ಸ್ ಇರಲಿಲ್ಲ. ಡೈರೆಕ್ಟರ್ ಹರ್ಷ ಸರ್ಗೆ ವಿಶ್ವಾಸವಿತ್ತು. ನನಗೇ ಇರಲಿಲ್ಲ. ನಾನಂತೂ ಮೊದಲೇ ನಿರ್ಧರಿಸಿದ್ದೆ. ಮೇಕಪ್ ನಂತರ ಎಲ್ಲರೂ ನನ್ನನ್ನು ನೋಡಿ ಹೆದರುವಂತಿರಬೇಕು. ಇಲ್ಲದಿದ್ರೆ ಪಾತ್ರದಲ್ಲೇ ಇರಲ್ಲ ಎಂದುಕೊಂಡಿದ್ದೆ. ಅಡ್ವಾನ್ಸ್ ಬದಲು ಚುಟ್ಟಾ ಕಳಿಸಿ ಪಾತ್ರಕ್ಕೆ ಸಿದ್ಧಗೊಳಿಸಿದ್ದರು ಹರ್ಷ. ಕ್ಯಾರವಾನ್ನಲ್ಲಿ ಗಂಟೆಗಟ್ಟಲೆ ಕುಳಿತು ಮೇಕಪ್ ಮಾಡಿಕೊಂಡು ಹೊರಬಂದಾಗ ಅಲ್ಲಿದ್ದ ಕಲಾವಿದರೊಬ್ಬರು ತುಂಬಾ ಚೆನ್ನಾಗಿ ಕಾಣುತ್ತಿದೆ. ಈ ಪಾತ್ರಕ್ಕೆ ನೀವು ಫಿಟ್ ಆಗಿದ್ದೀರಿ ಎಂದರು. ಆ ಕಲಾವಿದರೇ ಶಿವಣ್ಣ..
ಶೃತಿ ಹೀಗೆಲ್ಲ ಹೇಳಿದ್ದು ಭಜರಂಗಿ 2 ರಿಲೀಸ್ ಮಾಡೋಕೆ ಮೊದಲು ನಡೆದ ಕಾರ್ಯಕ್ರಮದಲ್ಲಿ.
ಭಜರಂಗಿ 2ನಲ್ಲಿ ಶೃತಿ ತಮ್ಮ ಕೆರಿಯರ್ನಲ್ಲಿ ಇದೂವರೆಗೆ ಮಾಡದೇ ಇರದಂತಾ ರೋಲ್ನಲ್ಲಿ.. ಗೆಟಪ್ನಲ್ಲಿ.. ಕಾಣಿಸಿಕೊಂಡಿದ್ದಾರೆ. ಅದು ಅಭಿಮಾನಿಗಳು, ಪ್ರೇಕ್ಷಕರಿಗೂ ಇಷ್ಟವಾಗಿರೋದು ಖುಷಿ ಕೊಟ್ಟಿರೋದು ಮಾತ್ರ ಜಯಣ್ಣ-ಭೋಗೇಂದ್ರ ಜೋಡಿಗೆ.. ಪ್ರೇಕ್ಷಕರಿಗೆ ಸಿನಿಮಾ ಹೆಚ್ಚು ಹೆಚ್ಚು ಇಷ್ಟವಾದಷ್ಟೂ ಹೆಚ್ಚು ಹೆಚ್ಚು ಖುಷಿ ಪಡೋದು ನಿರ್ಮಾಪಕರೇ ಅಲ್ವಾ..