` ಭಜರಂಗಿಗೆ ಶುಭ ಕೋರಿದ ಅಲ್ಲು ಅರ್ಜುನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಭಜರಂಗಿಗೆ ಶುಭ ಕೋರಿದ ಅಲ್ಲು ಅರ್ಜುನ್
Allu Arjun, Bhajarangi 2 Movie Image

ಭಜರಂಗಿ 2, ಕರ್ನಾಟಕದಲ್ಲಷ್ಟೇ ಅಲ್ಲ.. ಅತ್ತ ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ ಅಲೆಯನ್ನೇ ಸೃಷ್ಟಿಸಿರೋ ಭಜರಂಗಿ 2ಗೆ ತೆಲುಗಿನ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಶುಭ ಕೋರಿದ್ದಾರೆ. ತೆಲುಗಿನ ವರುಡುಕಾವಲೇನು ಚಿತ್ರದ ಈವೆಂಟ್‍ನಲ್ಲಿ ಭಾಗವಹಿಸಿದ್ದ ಅಲ್ಲು ಅರ್ಜುನ್, ಭಜರಂಗಿ 2ಗೆ ಶುಭ ಹಾರೈಸಿದ್ದಾರೆ.

ಕನ್ನಡದಲ್ಲಿ ಭಜರಂಗಿ 2 ರಿಲೀಸ್ ಆಗುತ್ತಿದೆ. ಎಲ್ಲರೂ ಕಾಯುತ್ತಿದ್ದಾರೆ. ಸಿನಿಮಾ ಟ್ರೇಲರ್ ನೋಡಿದ್ದೇನೆ. ಅದ್ಭುತವಾಗಿದೆ. ಆ ಚಿತ್ರ ಗೆಲ್ಲಲಿ. ಕನ್ನಡ ಚಿತ್ರರಂಗಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.

ಕೇರಳದಲ್ಲಿನ್ನೂ ಥಿಯೇಟರ್ ಓಪನ್ ಆಗಿಲ್ಲ ಎಂದು ಹೇಳಿದ ಅಲ್ಲು ಅರ್ಜುನ್, ತಮಿಳುನಾಡಿನಲ್ಲಿ ರಜನಿಕಾಂತ್`ರ ಅಣ್ಣಾತೆ ಕೂಡಾ ಗೆಲ್ಲಬೇಕು. ಚಿತ್ರರಂಗ ಮತ್ತೆ ಗೆಲುವಿನ ಹಾದಿಗೆ ಬರಲಿ ಎಂದು ಹಾರೈಸಿದ್ದಾರೆ.