ಶರಣ್ ಮತ್ತು ಆಶಿಕಾ ರಂಗನಾಥ್ ಮತ್ತೊಮ್ಮೆ ಜೋಡಿಯಾಗಿರೋ ಅವತಾರ ಪುರುಷ ಸಿನಿಮಾ ನವೆಂಬರ್‍ನಲ್ಲಿಯೇ ರಿಲೀಸ್ ಆಗಲಿದೆ. ಡೇಟ್ ಯಾವುದು ಅನ್ನೋದನ್ನ ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ.. ಅಷ್ಟೆ..ಭಜರಂಗಿ 2 ರಿಲೀಸ್ ಅಬ್ಬರ ಮುಗಿದು, ರಿಲೀಸ್ ಆದ ನಂತರ ಡೇಟ್ ಘೋಷಣೆಯಾಗಬಹುದು. ಮೂಲಗಳ ಪ್ರಕಾರ ರಿಲೀಸ್ ಡೇಟ್ ನವೆಂಬರ್ 18.
ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವತಾರ ಪುರುಷ, ಎರಡು ಭಾಗಗಳಲ್ಲಿ ರಿಲೀಸ್ ಆಗುತ್ತಿದೆ. ಕೆಜಿಎಫ್ ಮತ್ತು ಬಾಹುಬಲಿ ಮಾದರಿಯಲ್ಲಿ... ಸಿಂಪಲ್ ಸುನಿ ನಿರ್ದೇಶನವಿರೋ ಚಿತ್ರಕ್ಕೆ ಸುಧಾರಾಣಿ, ಸಾಯಿಕುಮಾರ್, ಶ್ರೀನಗರ ಕಿಟ್ಟಿ.. ಸೇರಿದಂತೆ ಭರ್ಜರಿ ತಾರಾಗಣವೇ ಇದೆ. ಹಾರರ್ ಥ್ರಿಲ್ಲರ್ ಚಿತ್ರದಲ್ಲಿ ಸುನಿ ಮತ್ತು ಶರಣ್ ಕಾಂಬಿನೇಷನ್ ಇರೋ ಕಾರಣ.. ಕಾಮಿಡಿಗಂತೂ ಬರವಿಲ್ಲ. ಕಥೆಗೆ ಮೋಸವಂತೂ ಇರೋದಿಲ್ಲ.