ರಮೇಶ್ ಅರವಿಂದ್, ರಚಿತಾ ರಾಮ್ ಮತ್ತೊಮ್ಮೆ ಜೊತೆಯಾಗಿರೋ ಸಿನಿಮಾ 100. ಇದು ಸೈಬರ್ ಕ್ರೈಂ ಕಥೆ ಇರೋ ಸಿನಿಮಾ. ಸೋಷಿಯಲ್ ಮೀಡಿಯಾ, ಸೈಬರ್ ಅಪರಾಧ, ಕೌಟುಂಬಿಕ ಸಂಬಂಧಗಳ ಸುತ್ತ ಇರೋ ಸಿನಿಮಾದ ನಿರ್ದೇಶಕ ಸ್ವತಃ ರಮೇಶ್ ಅರವಿಂದ್.
ರಮೇಶ್, ರಚಿತಾ ರಾಮ್ ಜೊತೆ ನಟಿಸಿರುವ ಇನ್ನೊಬ್ಬ ನಟಿ ಪೂರ್ಣಿಮಾ. ಗಾಳಿಪಟ 2 ಚಿತ್ರ ನಿರ್ಮಾಪಕರೂ ಆಗಿರೋ ರಮೇಶ್ ರೆಡ್ಡಿ, ಈ ಚಿತ್ರಕ್ಕೂ ನಿರ್ಮಾಪಕರು. ನಮ್ಮ ಸೂರಜ್ ಪ್ರೊಡಕ್ಷನ್ಸ್‍ನ ದೊಡ್ಡ ಚಿತ್ರವಿದು. ಪ್ರತಿಯೊಬ್ಬರೂ ನೋಡಬೇಕಾದ, ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ಸಿನಿಮಾ 100. ರಮೇಶ್ ಅರವಿಂದ್ ಪೊಲೀಸ್ ಪಾತ್ರ, ರಚಿತಾ, ಪೂರ್ಣಿಮಾ ಕಾಂಬಿನೇಷನ್ ಚಿತ್ರದ ಹೈಲೈಟ್ ಎನ್ನುತ್ತಾರೆ ರಮೇಶ್ ರೆಡ್ಡಿ. ಚಿತ್ರ ನವೆಂಬರ್ 19ಕ್ಕೆ ರಿಲೀಸ್.