ಈತ ಇತ್ತೀಚೆಗಷ್ಟೇ ಸ್ಯಾಂಡಲ್‍ವುಡ್‍ನಲ್ಲಿ ಗುರುತಿಸಿಕೊಳ್ಳುತ್ತಿದ್ದ ನಟ. ನಟಿಸಿದ್ದ ಚಿತ್ರಗಳು ದೊಡ್ಡ ಮಟ್ಟದ ಹಿಟ್ ಆಗಿಲ್ಲದೇ ಹೋಗಿದ್ದರೂ, ಚಿತ್ರಗಳ ಸಂಖ್ಯೆ ನಾಲ್ಕೈದು ದಾಟಿತ್ತು. ಹೆಸರು.. ಶೇಷಗಿರಿ ಬಸವರಾಜ್. ಡಾರ್ಕ್, ಸಸ್ಪೆನ್ಸ್, ಕಿಲಾಡಿಗಳು, ಆಶಿಕಿ 3 ಚಿತ್ರಗಳಲ್ಲಿ ನಟಿಸಿದ್ದ. ಈತನೀಗ ಅರೆಸ್ಟ್ ಆಗಿದ್ದಾನೆ. ಅದೂ ಅತ್ಯಾಚಾರದ ಕೇಸ್‍ನಲ್ಲಿ.
ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಈತನ ವಿರುದ್ಧ ಯುವತಿಯೊಬ್ಬರು ದೂರು ನೀಡಿದ್ದರು. ಬ್ಯಾಂಕ್ ಉದ್ಯೋಗಿಯೂ ಆಗಿದ್ದ ಶೇಷಗಿರಿ, ಬ್ಯಾಂಕ್‍ನಲ್ಲಿ ಕೆಲಸ ಕೊಡೋದಾಗಿ ಆಕೆಯನ್ನು ನಂಬಿಸಿದ್ದ. ವಂಚಿಸಿದ್ದ. ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ದುಡ್ಡನ್ನೂ ಪಡೆದುಕೊಂಡು ಮೋಸ ಮಾಡಿದ್ದ. ಇದೆಲ್ಲವನ್ನೂ ಆ ಯುವತಿ ದೂರಿನಲ್ಲಿ ತಿಳಿಸಿದ್ದಳು. ಆದರೆ, ಸಿನಿಮಾಗಾಗಿ ಬ್ಯಾಂಕ್ ಕೆಲಸವನ್ನೇ ಬಿಟ್ಟಿದ್ದ ಶೇಷಗಿರಿ, ಕಂಪ್ಲೇಂಟ್ ದಾಖಲಾದ ಮೇಲೆ ನಾಪತ್ತೆಯಾಗಿದ್ದ. ಮೈಸೂರಿನಲ್ಲಿ ಪತ್ತೆಯಾದ ಆತನನ್ನೀಗ ಪೊಲೀಸರು ವಿಚಾರಣೆಗಾಗಿ ಬೆಂಗಳೂರಿಗೆ ಕರೆದು ತಂದಿದ್ದಾರೆ.