ಪ್ರೇಮಲೋಕ. ಕನ್ನಡ ಚಿತ್ರರಂಗದ ಲವ್ಲೀ ಲವ್ಲೀ ಲವ್ ಸ್ಟೋರಿ. ದಶಕಗಳೇ ಕಳೆದರೂ.. ಪ್ರೇಮಲೋಕ ಇವತ್ತಿಗೂ ಕ್ರೇಜ್ ಇಟ್ಟುಕೊಂಡಿದೆ. ಪ್ರೇಮಲೋಕದ ಸೃಷ್ಟಿಕರ್ತ ವಿ.ರವಿಚಂದ್ರನ್. ಅವರ ಸೃಷ್ಟಿಯನ್ನೇ ಮರುಸೃಷ್ಟಿಸಲು ಪ್ರಯತ್ನಿಸಿರೋದು ಅವರ ಪುತ್ರ ಮನುರಂಜನ್.
ಮನುರಂಜನ್ ಅಭಿನಯದ ಮುಗಿಲ್ ಪೇಟೆಯಲ್ಲಿ ಪ್ರೇಮಲೋಕದ ದೃಶ್ಯವನ್ನು ಮರುಸೃಷ್ಟಿಸಲಾಗಿದೆಯಂತೆ. ಮುಗಿಲ್‍ಪೇಟೆ ಪ್ರೇಮಲೋಕವನ್ನು ಮೀಟ್ ಮಾಡಿದರೆ.. ಅನ್ನೋ ಕಲ್ಪನೆಯಲ್ಲೇ ದೃಶ್ಯ ಸೃಷ್ಟಿಸಲಾಗಿದೆ.
ಪ್ರೇಮಲೋಕದ ಸೀನ್ ಇದೆಯಲ್ಲ.. ಪ್ರಾಸ ಮತ್ತು ಮುತ್ತಿನ ಕಥೆ.. ಅದನ್ನೇ ಯಥಾವತ್ ಮಾಡಿದ್ದಾರೆ. ಅಲ್ಲಿ ರವಿ ಮತ್ತು ಜ್ಯೂಹಿ ಚಾವ್ಲಾ. ಇಲ್ಲಿ ಮನುರಂಜನ್ ಮತ್ತು ಕಯಾದು ಲೋಹರ್. ಮರುಸೃಷ್ಟಿಕರ್ತ.. ಮುಗಿಲ್‍ಪೇಟೆ ನಿರ್ದೇಶಕ ಭರತ್ ಎಸ್.ನಾವುಂದ. ರಕ್ಷಾ ವಿಜಯ್ ಕುಮಾರ್ ನಿರ್ಮಾಣದ ಮುಗಿಲ್ ಪೇಟೆ, ರಿಲೀಸ್ ಆಗೋಕೆ ಸಿದ್ಧವಾಗಿ ನಿಂತಿದೆ.