ನನ್ನ ಮತ್ತು ಸುದೀಪ್ ಮಧ್ಯೆ ಮನಸ್ತಾಪವೂ ಇಲ್ಲ. ಏನೂ ಇಲ್ಲ. ಏನೇ ಕಷ್ಟ ಬಂದರೂ ಎದುರಿಸಬೇಕು. ಗೆಲ್ಲಬೇಕು. ಅದನ್ನು ಮನದಟ್ಟು ಮಾಡಿಸಿ, ಗೆಲ್ಲಿಸಿದ್ದು ಕಿಚ್ಚ ಸುದೀಪ್. ನಮ್ಮ ಹೀರೋ ಸುದೀಪ್. ಜಾಕ್ ಮಂಜು ಎಲ್ಲರಿಗೂ ಧನ್ಯವಾದಗಳು. ಕಿಚ್ಚನ ಅಭಿಮಾನಿಗಳಿಗೆ ಕೃತಜ್ಞತೆಗಳು..
ಸೂರಪ್ಪ ಬಾಬು ಮಾತನಾಡುತ್ತಾ ಹೋದಂತೆ ಕೋಟಿಗೊಬ್ಬ 3 ಚಿತ್ರತಂಡ ಸಂಭ್ರಮ ಪಡುತ್ತಿತ್ತು. ಇದೆಲ್ಲ ನಡೆದದ್ದು ಕೋಟಿಗೊಬ್ಬ 3 ಸಕ್ಸಸ್ ಸಂಭ್ರಮದಲ್ಲಿ.
ಚಿತ್ರವನ್ನು ಗೆಲ್ಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಒಂದೊಳ್ಳೆ ಸಿನಿಮಾ ಮಾಡಿದ ಖುಷಿ ಇದೆ. ತೆಲುಗು ವರ್ಷನ್ ನವೆಂಬರ್ 1ಕ್ಕೆ ರಿಲೀಸ್ ಆಗುತ್ತಿದೆ ಎಂದು ಮಾಹಿತಿ ನೀಡಿದ್ದು ಕಿಚ್ಚ ಸುದೀಪ್.
ನಿರ್ದೇಶಕ ಶಿವಕಾರ್ತಿಕ್‍ಗೆ ಮೊದಲ ಚಿತ್ರದ ಸೂಪರ್ ಹಿಟ್ ಆದ ಖುಷಿಯಿತ್ತು. ಹಿಟ್ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಸಂಭ್ರಮ ನಾಯಕಿ ಮಡೋನ್ನಾ ಮಾತಿನಲ್ಲಿತ್ತು.
ಸೂರಪ್ಪ ಬಾಬು ಮತ್ತು ಕಿಚ್ಚನ ಮೇಲಿನ ಪ್ರೀತಿಯಿಂದ ಬಂದಿದ್ದ ರಿಯಲ್ ಸ್ಟಾರ್ ಉಪೇಂದ್ರ ಇಂಥಾದ್ದೊಂದು ಗೆಲುವು ಕನ್ನಡ ಚಿತ್ರರಂಗಕ್ಕೆ ಬೇಕಿತ್ತು. ಚಿತ್ರತಂಡದ ಪ್ರತಿಯೊಬ್ಬರಿಗೂ ಚಿತ್ರರಂಗದ ಪರವಾಗಿ ಥ್ಯಾಂಕ್ಸ್ ಎಂದರು.