ಕೋಟಿಗೊಬ್ಬ 3 ಸಕ್ಸಸ್ ಮೀಟ್ ಕಾರ್ಯಕ್ರಮ ನಡೆಯುತ್ತಿತ್ತು. ಚಿತ್ರತಂಡದವರೆಲ್ಲರೂ ಹಾಜರಿದ್ದರು. ಆರಂಭದಲ್ಲಿ ಎಡವಟ್ಟು ಮಾಡಿಕೊಂಡ ಕಾರಣಕ್ಕೆ
ಸುದ್ದಿಯಾಗಿದ್ದ ಕೋಟಿಗೊಬ್ಬ 3, ನಂತರ ಮಾತಾಡಿದ್ದು ಕಲೆಕ್ಷನ್ನಿನ ಮೂಲಕ. ಸಹಜವಾಗಿಯೇ ಖುಷಿಯಾಗಿದ್ದ ಚಿತ್ರತಂಡ ಸಕ್ಸಸ್ ಮೀಟ್ ಕರೆದಿತ್ತು. ಸುದೀಪ್, ಮಡೋನ್ನಾ.. ಜೊತೆ ಸೂರಪ್ಪ ಬಾಬು, ಶೇಖರ್ ಚಂದ್ರ, ಅರ್ಜುನ್ ಜನ್ಯಾ.. ಎಲ್ಲರೂ ಕಾರ್ಯಕ್ರಮದಲ್ಲಿದ್ದರು. ಈ ಸಂದರ್ಭದಲ್ಲಿ ಅರ್ಜುನ್ ಜನ್ಯಾ ಒಂದು ಸಣ್ಣ ಎಡವಟ್ಟು ಮಾಡಿದರು.
ಕಾರ್ಯಕ್ರಮಕ್ಕೆ ಅರ್ಜುನ್ ಜನ್ಯಾ ಆಗಮಿಸಿದಾಗ ಸುದೀಪ್ ಆಗಲೇ ಬಂದವರೊಂದಿಗೆ ಮಾತನಾಡುತ್ತಿದ್ದರು. ಜನ್ಯಾ ಸೀದಾ ಹೋದವರೇ.. ಸುದೀಪ್ ಕಾಲಿಗೆ ನಮಸ್ಕರಿಸಿದರು. ವಾಟ್ಸ್ ರಾಂಗ್ ವಿಥ್ ಯೂ.. ಎಂದು ಗದರಿದ ಸುದೀಪ್, ಜನ್ಯಾಗೆ ಬೆನ್ನು ತಟ್ಟಿದರು.
ಅರ್ಜುನ್ ಜನ್ಯಾ ಅವರು ಮ್ಯೂಸಿಕ್ ಡೈರೆಕ್ಟರ್ ಆಗಿದ್ದು ಕೆಂಪೇಗೌಡ ಚಿತ್ರದ ಮೂಲಕ. ಅಂದಿನಿಂದಲೂ ಜನ್ಯಾಗೆ ಬೆನ್ನೆಲುಬಾಗಿ ನಿಂತಿರೋದು ಸುದೀಪ್. ಅರ್ಜುನ್ ಜನ್ಯಾ ಅಣ್ಣ ಆಸ್ಪತ್ರೆಯಲ್ಲಿದ್ದಾಗ ಕೋಟಿಗೊಬ್ಬ 3 ಚಿತ್ರದ ಬಿಜಿಎಂ ಕೆಲಸ ನಡೆಯುತ್ತಿದ್ದರು. ಅಣ್ಣ ಉಳಿಯದೇ ಹೋದರೂ.. ಆ ಸಂದರ್ಭದಲ್ಲಿ ಜೊತೆಗಿದ್ದು ಧೈರ್ಯ ನೀಡಿದ್ದವರು ಸುದೀಪ್. ಹೀಗಾಗಿ ಸುದೀಪ್ ಅವರ ಬಗ್ಗೆ ಅಭಿಮಾನಕ್ಕಿಂತ ಹೆಚ್ಚು ಗೌರವ ಇಟ್ಟುಕೊಂಡಿರೋ ಜನ್ಯಾ ಅದನ್ನು ಹಲವು ಬಾರಿ ಹೇಳಿಕೊಂಡೂ ಇದ್ದಾರೆ. ಆದರೆ ಸುದೀಪ್ ಅವರಿಗೆ ಯಾರೂ ತಮ್ಮ ಕಾಲಿಗೆ ಬೀಳೋದು ಇಷ್ಟವಾಗಲ್ಲ. ಅಷ್ಟೆ...