ಸಿಂಪಲ್ಲಾಗಿದ್ದರೂ ಸಖತ್ ಆಗಿರೋದೇ ಸಖತ್ ಟೀಸರ್ ಹೆಗ್ಗಳಿಕೆ. ಚಿತ್ರದ ಟೀಸರ್‍ನಲ್ಲಿ ಎಂದಿನಂತೆ ಮುಗುಳುನಗೆ ಮೂಡುವಂತೆ ಮಾಡುತ್ತಲೇ ನಾನು ಹೊಸ ಕಥೆ ಹೇಳುತ್ತಿದ್ದೇನೆ ಎನ್ನುವುದನ್ನು ಸಾರಿಬಿಡುತ್ತಾರೆ ಸಿಂಪಲ್ ಸುನಿ.
ಟೀಸರ್ ನೋಡಿದವರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅಂಧ ಹೌದೋ.. ಅಲ್ಲವೋ.. ಆತ ನಾಟಕ ಮಾಡುತ್ತಿದ್ದಾನೋ.. ನಾಯಕಿಗಾಗಿ ಇದನ್ನೆಲ್ಲ ಆಡ್ತಿದ್ದಾನಾ.. ಸಂಥಿಂಗ್ ಡ್ರಾಮಾ ಇದೆ ಅನ್ನೊದನ್ನು ತೋರಿಸಿಬಿಡ್ತಾರೆ ಸುನಿ. ಇದರ ಜೊತೆ ಒಂದು ಮರ್ಡರ್, ಕೋರ್ಟು.. ಎಲ್ಲವೂ ಬರುತ್ತೆ. ಕಥೆಯಲ್ಲಿ ಕೇವಲ ಕಾಮಿಡಿ ಅಷ್ಟೇ ಅಲ್ಲ, ಲವ್ ಸ್ಟೋರಿ ಅಷ್ಟೇ ಅಲ್ಲ.. ಕ್ರೈಂ ಥ್ರಿಲ್ಲರ್ ಸಸ್ಪೆನ್ಸ್ ಕೂಡಾ ಇದೆ.
ಗಣೇಶ್ ಎದುರು ನಾಯಕಿಯಾಗಿರೋದು ನಿಶ್ವಿಕಾ ನಾಯ್ಡು. ಸಾಧು ಕಚಗುಳಿ ಇಡೋಕೆ ರೆಡಿ ಇದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ನಿಶಾ ವೆಂಕಟ್ ಕೋಣಂಕಿ ಮತ್ತು ಸುಪ್ರೀತ್ ಈ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ. ನವೆಂಬರ್ 12ಕ್ಕೆ ರಿಲೀಸ್ ಮಾಡೋಕೆ ಸಖತ್ ಆಗಿ ಪ್ಲಾನ್ ಮಾಡಿಕೊಂಡಿದೆ ಸಖತ್ ಟೀಂ.