` ನೈಟ್ ಕಫ್ರ್ಯೂ ಪ್ರಾಬ್ಲಂ ಸರಿ ಮಾಡುತ್ತಾ ಸರ್ಕಾರ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನೈಟ್ ಕಫ್ರ್ಯೂ ಪ್ರಾಬ್ಲಂ ಸರಿ ಮಾಡುತ್ತಾ ಸರ್ಕಾರ?
CM Basavraj Bommaiah

ಥಿಯೇಟರುಗಳು ಓಪನ್ ಆಗಿವೆ. 100% ಭರ್ತಿಗೆ ಅವಕಾಶಗಳೂ ಇವೆ. ಜನರೂ ಥಿಯೇಟರಿಗೆ ಬಂದಿದ್ದಾರೆ. ಹಬ್ಬದ ದಿನ ರಿಲೀಸ್ ಆದ ಸಲಗ ಮತ್ತು ಕೋಟಿಗೊಬ್ಬ 3 ಎರಡೂ ಚಿತ್ರಗಳು ಭರ್ಜರಿ ಪ್ರದರ್ಶನ ಕಾಣುತ್ತಿವೆ. ಆದರೆ.. ಈಗಲೂ ಸಮಸ್ಯೆ ಬಗೆಹರಿದಿಲ್ಲ. ನೈಟ್ ಕಫ್ರ್ಯೂ ಜಾರಿಯಲ್ಲಿದ್ದು, ಥಿಯೇಟರ್ ಮಾಲೀಕರು ಮತ್ತು ಚಿತ್ರಮಂದಿರ ಮಾಲೀಕರನ್ನು ಸಂಕಷ್ಟಕ್ಕೆ ನೂಕಿದೆ.

ರಾತ್ರಿ 10 ಗಂಟೆ ನಂತರ ನೈಟ್ ಕಫ್ರ್ಯೂ ಜಾರಿಯಲ್ಲಿದೆ. ಹೀಗಾಗಿ ಹಲವೆಡೆ ಸೆಕೆಂಡ್ ಶೋ ಸಾಧ್ಯವಾಗುತ್ತಿಲ್ಲ. ರಾತ್ರಿ 10 ಗಂಟೆ ನಂತರವೂ ಮಲ್ಟಿಪ್ಲೆಕ್ಸ್‍ಗಳಲ್ಲಿ ಶೋಗಳಿರುತ್ತಿದ್ದವು. ನೈಟ್ ಕಫ್ರ್ಯೂನಿಂದಾಗಿ ರಾಜ್ಯದಲ್ಲಿರೋ 60+ ಮಲ್ಟಿಪ್ಲೆಕ್ಸ್‍ಗಳಲ್ಲಿ 10 ಗಂಟೆ ಶೋ ಇಲ್ಲ. 10 ಗಂಟೆ ಶೋಗಳಿದ್ದರೆ ಚಿತ್ರಗಳು 12 ರಿಂದ 13 ಕೋಟಿ ಬ್ಯುಸಿನೆಸ್ ಮಾಡುತ್ತಿದ್ದವು. ನಿರ್ಮಾಪಕರಿಗೆ 2ರಿಂದ 3 ಕೋಟಿ ಲಾಭ ಸಿಗುತ್ತಿತ್ತು. ದಯವಿಟ್ಟು ನೈಟ್ ಕಫ್ರ್ಯೂ ನಿರ್ಬಂಧ ತೆಗೆಯಿರಿ ಎನ್ನುವುದು ನಿರ್ಮಾಪಕರ ಮನವಿ.

ಮುಖ್ಯಮಂತ್ರಿಗಳು ಬೈ ಎಲೆಕ್ಷನ್ ಪ್ರಚಾರದಲ್ಲಿ ಬ್ಯುಸಿ ಇರೋದ್ರಿಂದ ನೇರವಾಗಿ ಮನವಿ ಸಲ್ಲಿಸೋಕೆ ಆಗುತ್ತಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದ ಮೂಲಕವೇ ಮನವಿ ಮಾಡುತ್ತಿದ್ದೇವೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು.