ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾ ರಿಲೀಸ್‍ಗೆ ಸಿದ್ಧವಾಗಿದೆ. ಸೀತಾರಾಮ ಕಲ್ಯಾಣ ಮತ್ತು ಕುರುಕ್ಷೇತ್ರದ ನಂತರ ರಿಲೀಸ್ ಆಗುತ್ತಿರೋ ಸಿನಿಮಾವಿದು. ಸ್ಪೋಟ್ರ್ಸ್ ಬೇಸ್ ಕಥೆ ಇರೋ ಚಿತ್ರವಾದ್ದರಿಂದ ಸಿನಿಮಾ ಮೇಲೆ ಭಾರಿ ನಿರೀಕ್ಷೆಯೂ ಇದೆ. ಚಿತ್ರದಲ್ಲಿ ನಿಖಿಲ್ ಬ್ಯಾಸ್ಕೆಟ್ ಬಾಲ್ ಪ್ಲೇಯರ್. ಚಿತ್ರತಂಡ ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿತು. ನಿಖಿಲ್ ಮತ್ತು ನಿರ್ಮಾಪಕ ಸುನಿಲ್ ಗೌಡ ಚಾಮುಂಡೇಶ್ವರಿಯ ಆಶೀರ್ವಾದ ಪಡೆದರು.
ನಿಖಿಲ್ ಎದುರು ಕಾಶ್ಮೀರಿ ಪರದೇಸಿ, ಸಂಪದಾ ನಾಯಕಿಯರಾಗಿದ್ದರೆ, ಶೋಭರಾಜ್, ರಾಜೇಶ್ ನಟರಂಗ ಮೊದಲಾದವರು ಪ್ರಧಾನ ಪಾತ್ರಗಳಲ್ಲಿದ್ದಾರೆ. ಸುನಿಲ್ ಗೌಡ ಜೊತೆ ಲಹರಿ ಸಂಸ್ಥೆ ಕೂಡಾ ನಿರ್ಮಾಣದ ಹೊಣೆ ಹೊತ್ತಿದ್ದು, ವಿಜಯ್ ಕುಮಾರ್ ಕೊಂಡ ನಿರ್ದೇಶಕ. ಚಿತ್ರ ನವೆಂಬರ್‍ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.